ಮಾವಿನ ಹಣ್ಣನ್ನು ಕೊಳ್ಳಲು ಮುಗಿಬಿದ್ದ ಜನ

ಶುಕ್ರವಾರ, 2 ಜೂನ್ 2023 (18:38 IST)
ಸಸ್ಯ ಕಾಶೀ ಲಾಲ್ಬಾಗ್ನಲ್ಲಿ ಎಲ್ಲಿ ನೋಡಿದರೂ ಹಣ್ಣುಗಳ ರಾಜನದ್ದೇ ಕಾರು ಬಾರಾಗಿದ್ದು ಇಂದಿನಿಂದ 9 ದಿನಗಳ ಕಾಲ ಮಾವಿನ ಮೇಳವನ್ನು ಆಯೋಜಿಸಲಾಗಿದ್ದು.ಮಾವು ಮಾರುಕಟ್ಟೆಗೆ ಎಂಟ್ರಿ ಕೊಟ್ಟು ಬಹಳ ದಿನಗಳೇ ಕಳೆದಿದ್ದು, ಎಲ್ಲೆಲ್ಲೂ ಈಗ ಮಾವಿನ ಹಣ್ಣುಗಳದ್ದೇ ಕಾರು ಬಾರು. ರಾಜ್ಯದ ವಿವಿಧ ಭಾಗಗಳಿಂದ ಬೆಂಗಳೂರಿಗೆ  ವೆರೈಟಿ ಹಣ್ಣುಗಳು ಬರುತ್ತಿದ್ದು, ಬಾಯಲ್ಲಿ ನೀರೂರಿಸುವಂತಿವೆ. ರಾಜ್ಯದಲ್ಲಿ ಅಕಾಲಿಕ ಮಳೆಯಿಂದ ಇಳುವರಿ ಮೇಲೆ ಭಾರಿ ಪರಿಣಾಮ ಬೀರಿದ್ದು ಇದರ ನಡುವೆಯು ಬೆಂಗಳೂರಿನಲ್ಲಿ ಇಂದಿನಿಂದ 9 ದಿನಗಳ ಕಾಲ ಮಾವು ಮೇಳ ನಡೆಯಲಿದೆ.

ಸಸ್ಯಕಾಶಿ ಲಾಲ್ ಬಾಗ್ ನಲ್ಲಿ ಇಂದಿನಿಂದ ಜೂನ್ 11ರ ವರೆಗೆ 9 ದಿನಗಳ ಕಾಲ ಮಾವಿನ ಮೇಳ ಆಯೋಜಿಸಲಾಗಿದೆ. ಬಾದಾಮಿ, ಮಲ್ಲಿಕಾ, ರಸಪುರಿ, ಬೈಗಂಪಲ್ಲಿ, ಸೇಂದೂರ, ತೋತಾಪುರಿ, ದಶಹರಿ, ಮಲಗೋವಾ, ಹಿಮಾಮ್ ಪಸಂದ್, ಕಾಲಾಪಾಡ್, ಕೇಸರ್ ಸೇರಿ ಬಗೆ ಬಗೆಯ ಮಾವುಗಳು ಜನರ ಬಾಯಲ್ಲಿ ನೀರೂರಿಸುತ್ತಿವೆ.ರೈತರಿಂದ ನೇರವಾಗಿ ಗ್ರಾಹಕರಿಗೆ ತಲುಪಿಸಲು ಕರ್ನಾಟಕ ರಾಜ್ಯ ಸರ್ಕಾರದ ತೋಟಗಾರಿಕಾ ಇಲಾಖೆಯು ಈ ವರ್ಷ ಮಾವು ಮೇಳವನ್ನು ಆಯೋಜಿಸಿದೆ. ಈ ಬಾರಿ ಅಕಾಲಿಕ  ಮಳೆಯಿಂದಾಗಿ ಮಾವಿನ ಇಳುವರಿಯು ಕಡಿಮೆಯಾದ ಕಾರಣ ಕೇವಲ 75 ಸ್ಟಾಲ್ಗಳಲ್ಲಿ ಈ ಬಾರಿ ಮಾವಿನ ಮೇಳವನ್ನು ಆಯೋಜಿಸಲಾಯಿತು.
 
ಮಾವಿನ ಹಣ್ಣುಗಳ ದರ ಈ ರೀತಿ ಇದೆ
 
ಬಾದಾಮಿ: 130 ರೂಪಾಯಿ
 
ರಸಪುರಿ: 80 ರೂಪಾಯಿ
 
ತೋತಾಪುರಿ: 35 ರೂಪಾಯಿ
 
ಶುಗರ್ ಬೇಬಿ -120 ರೂಪಾಯಿ
 
ಅಲ್ಪೋನ್ಸೋ: 155 ರೂಪಾಯಿ
 
ಮಲ್ಲಿಕಾ: 100 ರೂಪಾಯಿ
 
ಇಮಾಮ್ ಪಸಂದ್:175 ರೂಪಾಯಿ
 
ಸೇಂದೂರ: 60ರೂಪಾಯಿ
 
ಮಲ್ಗೋವಾ: 150 ರೂಪಾಯಿ
 
ಬಂಗನಪಲ್ಲಿ: 80 ರೂಪಾಯಿ
ಇಂದಿನಿಂದ ಜೂ.11ರವರೆಗೆ ಲಾಲ್ ಬಾಗ್ ನಲ್ಲಿ ಮಾವು ಮೇಳ ನಡೆಯಲಿದ್ದು, ವಿವಿಧ ಜಿಲ್ಲೆಗಳಿಂದ ರೈತರು ಆಗಮಿಸಿ ತಮ್ಮ ತೋಟದಲ್ಲಿ ಸಾವಯವ ಕೃಷಿಯಿಂದ ಬೆಳೆದ ಮಾವಿನ ಹಣ್ಣನ್ನು ಮಾರುತ್ತಿದ್ದರೆ ಮತ್ತೊಂದು ಕಡೆ ತಮ್ಮ ನೆಚ್ಚಿನ ಬಗೆಯ ಮಾವಿನ ಹಣ್ಣನ್ನು ತಿಂದು ಜನರು ಫುಲ್ ಖುಷ್ ಆದರೂ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ