ಪರಿಶೀಲನೆ ನಂತರ ಫೋನ್ ಟ್ಯಾಪಿಂಗ್ ಎಲ್ಲವೂ ತಿಳಿಯಲಿದೆ: ಪರಮೇಶ್ವರ್

ಮಂಗಳವಾರ, 7 ನವೆಂಬರ್ 2017 (16:20 IST)
ಚಿಕ್ಕಮಗಳೂರು : ಫೋನ್ ಕದ್ದಾಲಿಕೆ ವಿಚಾರವನ್ನು ಸಚಿವ ಎಂ.ಬಿ.ಪಾಟೀಲ್ ಈ ಬಗ್ಗೆ ಸಿಎಂ ಗಮನಕ್ಕೆ ತಂದಿದ್ದಾರೆ ಎಂದು ಕೆಪಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೆಂಟ್ರಲ್ ಏಜೆನ್ಸಿಸ್ ಗಳು ಈ ಕೃತ್ಯ ಮಾಡುತ್ತಿದ್ದಾರೆ ಎಂದು ಎಂ.ಬಿ.ಪಾಟೀಲ್ ಆರೋಪಿಸಿದ್ದಾರೆ. ಐಟಿ, ಇಡಿ ಅಥವಾ ಸಿಬಿಐ ಮಾಡುತ್ತಿದೆಯೇ ಎಂಬುದು ಗೊತ್ತಿಲ್ಲ. ಅದೆಲ್ಲಾ ತಿಳಿದ ಮೇಲೆ ಸೂಕ್ತ ಪ್ರತಿಕ್ರಿಯೆ ನೀಡಲಾಗುವುದು ಎಂದರು.

ಕೇಂದ್ರ ಸರ್ಕಾರ ಸಿಬಿಐ, ಐಟಿ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ನಾವು ಅನೇಕ ಬಾರಿ ಆರೋಪಿಸಿದ್ದೇವೆ. ಈ ಹಿನ್ನೆಲೆಯಲ್ಲಿ ಎಂ.ಬಿ.ಪಾಟೀಲ್ ಚಲನವಲನಗಳನ್ನು ನೋಡಲಾಗುತ್ತಿದೆ ಎಂದು ಕಾಣುತ್ತೆ. ಅದಕ್ಕಾಗಿ ಎಂ.ಬಿ.ಪಾಟೀಲ್ ಆರೋಪಿಸಿದ್ದಾರೆ. ಪರಿಶೀಲನೆ ನಂತರ ಎಲ್ಲವೂ ತಿಳಿಯಲಿದೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ