ಪ್ರಲ್ಹಾದ್ ಜೋಶಿ ಮೂಲಕ ಎಸ್ಎಂ ಕೃಷ್ಣಗೆ ಮೋದಿ ಕಳುಹಿಸಿದ ವಿಶೇಷ ಗೌರವವೇನು ನೋಡಿ

Krishnaveni K

ಬುಧವಾರ, 11 ಡಿಸೆಂಬರ್ 2024 (16:17 IST)
ಮದ್ದೂರು: ಅಗಲಿರುವ ಆತ್ಮೀಯ ಎಸ್ಎಂ ಕೃಷ್ಣಗೆ ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮೂಲಕ ವಿಶೇಷ ಗೌರವ ಸಲ್ಲಿಸಿದ್ದಾರೆ. ಅದೇನೆಂದು ಇಲ್ಲಿ ನೋಡಿ.

ಎಸ್ಎಂ ಕೃಷ್ಣ ಮೇಲೆ ಪ್ರಧಾನಿ ಮೋದಿಗೆ ವಿಶೇಷ ಗೌರವವಿತ್ತು. ಮೋದಿ ಮೇಲಿನ ಪ್ರೀತಿಯಿಂದಲೇ ಎಸ್ಎಂ ಕೃಷ್ಣ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಇದೀಗ ಎಸ್ಎಂಕೆ ಅಗಲಿದ ಸುದ್ದಿ ತಿಳಿಯುತ್ತಿದ್ದಂತೇ ಪ್ರಧಾನಿ ಮೋದಿ ಟ್ವೀಟ್ ಮಾಡಿ ಸಂತಾಪ ವ್ಯಕ್ತಪಡಿಸಿದ್ದರು.

ಕೇವಲ ಟ್ವೀಟ್ ಮಾತ್ರವಲ್ಲದೇ ಎಸ್ಎಂಕೆ ಕುಟುಂಬಕ್ಕೆ ವಿಶೇಷ ಸಂದೇಶ ಕಳುಹಿಸಿಕೊಟ್ಟಿದ್ದಾರೆ. ನಿನ್ನೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮುಚ್ಚಿದ ಲಕೋಟೆಯಲ್ಲಿರುವ ಪ್ರಧಾನಿ ಮೋದಿಯವರ ಸಂದೇಶವನ್ನು ಎಸ್ಎಂಕೆ ಪತ್ನಿ ಪ್ರೇಮಾ ಕೃಷ್ಣಗೆ ನೀಡಿದ್ದಾರೆ. ಇಂದು ಸಕಲ ಸರ್ಕಾರೀ ಗೌರವಗಳೊಂದಿಗೆ ಎಸ್ಎಂಕೆಗೆ ಅಂತಿಮ ವಿಧಿ ವಿಧಾನ ನೆರವೇರಿಸಲಾಗಿದೆ.

ಈ ವೇಳೆ ಗಣ್ಯರು ಹೂಗುಚ್ಛವನ್ನಿಟ್ಟು ಗೌರವ ಸಮರ್ಪಿಸಿದ್ದಾರೆ. ಈ ವೇಳೆ ಪ್ರಧಾನಿ ಮೋದಿಯವರ ಪರವಾಗಿ ಪ್ರಲ್ಹಾದ್ ಜೋಶಿ ಹೂಗುಚ್ಛವನ್ನಿಟ್ಟು ನಮಸ್ಕರಿಸಿ ಗೌರವ ಸಲ್ಲಿಸಿದ್ದಾರೆ. ಇಂದು ಅಂತಿಮ ವಿಧಿ ವಿಧಾನದ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿಯ ಹೆಚ್ಚಿನ ನಾಯಕರು ಬಂದು ಅಂತಿಮ ನಮನ ಸಲ್ಲಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ