ಪೀಠ ತನ್ನ ತೀರ್ಪಿನಲ್ಲಿ ಸಿಆರ್ಪಿಸಿ ಸೆಕ್ಷನ್ 102ರ ಅಡಿ ಪೊಲೀಸರಿಗೆ ದಾಖಲೆಗಳನ್ನು ಜಪ್ತಿ ಮಾಡುವ ಅಧಿಕಾರವಿದೆ. ಅದೇ ರೀತಿ ಸೆಕ್ಷನ್ 104ರ ಪ್ರಕಾರ ನ್ಯಾಯಾಲಯಕ್ಕೆ ದಾಖಲೆಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರವಿದೆ. ಆದರೆ, ಪಾಸ್ಪೋರ್ಟ್ ಕಾಯ್ದೆ-1967ರ ಸೆಕ್ಷನ್ 10ರಲ್ಲಿ ಪಾಸ್ಪೋರ್ಟ್ ಬದಲಾವಣೆ, ವಶಪಡಿಸಿಕೊಳ್ಳುವಿಕೆ ಹಾಗೂ ಹಿಂಪಡೆಯುವ ಅಧಿಕಾರ ಪಾಸ್ಪೋರ್ಟ್ ಸಕ್ಷಮ ಪ್ರಾಧಿಕಾರಕ್ಕೆ ಮಾತ್ರವೇ ಇದೆ. ಪಾಸ್ಪೋರ್ಟ್ ಕಾಯ್ದೆಯು ವಿಶೇಷ ಶಾಸನವಾಗಿದ್ದು ಅದರ ನಿಯಮಗಳ ಮೇಲೆ ಸಿಆರ್ಪಿಸಿಯ ನಿಯಮಗಳನ್ನು ಚಲಾಯಿಸಲಾಗದು ಎಂದು ಅಭಿಪ್ರಾಯಪಟ್ಟಿದೆ.