ಮಹಿಳೆ ಮುಂದೆ ಮಾಡಬಾರದ್ದು ಮಾಡಿ ಸಿಕ್ಕಿಹಾಕಿಕೊಂಡ ಪೊಲೀಸ್
ಹೆಡ್ ಕಾನ್ ಸ್ಟೇಬಲ್ ಆಗಿ ಕೆಲಸ ಮಾಡುತ್ತಿದ್ದ ಚಂದ್ರಶೇಖರ್ ಎಂಬಾತ ಮಹಿಳೆ ಮುಂದೆ ಸ್ಕೂಟಿ ನಿಲ್ಲಿಸಿ ಟಾರ್ಚ್ ಹಾಕಿ ತನ್ನ ಮರ್ಮಾಂಗ ಪ್ರದರ್ಶಿಸಿದ್ದಾನೆ. ಆತನ ಅಸಭ್ಯ ವರ್ತನೆ ಕಂಡುಬಂದು ಸ್ಥಳದಲ್ಲಿದ್ದವರು ಆತನ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.
ಜನರ ಗುಂಪು ಸೇರುತ್ತಿದ್ದಂತೇ ಸ್ಥಳದಿಂದ ಪೇದೆ ಎಸ್ಕೇಪ್ ಆಗಿದ್ದಾನೆ. ಈ ಘಟನೆ ಅರಿವಿಗೆ ಬರುತ್ತಿದ್ದಂತೇ ಮೇಲಧಿಕಾರಿಗಳು ಆತನನ್ನು ಸಸ್ಪೆಂಡ್ ಮಾಡಿದ್ದಾರೆ.