ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿದ ಪ್ರಿಯತಮೆ,ಪೊಲೀಸಪ್ಪ ಸಾವು
ಕಾನ್ಸ್‌ಟೇಬಲ್- ಹೋಂಗಾರ್ಡ್ ಲವ್ ಸ್ಟೋರಿ ದುರಂತದಲ್ಲಿ ಅಂತ್ಯವಾದ ಘಟನೆ ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಾನ್ಸ್‌ಟೇಬಲ್ ಸಂಜಯ್ ಮತ್ತು ಹೋಂಗಾರ್ಡ್ ರಾಣಿ ಇಬ್ಬರೂ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡ್ತಿದ್ರು.
ಈ ವೇಳೆ ಇಬ್ಬರ ಮಧ್ಯೆ ಪ್ರೇಮ ಬೆಳೆದಿತ್ತು. ಕೊನೆಗೆ ಭಿನ್ನಾಭಿಪ್ರಾಯ ಶುರುವಾಗಿದ್ದು ಪ್ರೀತಿ ಬ್ರೇಕ್ ಅಪ್ ಆದ ಮೇಲೆ ಪ್ರಶ್ನೆ ಮಾಡಿದ್ದಕ್ಕೆ ಹೋಂಗಾರ್ಡ್ ರಾಣಿ, ಕಾನ್ಸ್‌ಟೇಬಲ್ ಸಂಜಯ್ ಮೇಲೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿದ್ದಾರೆ ಎಂದು ದೂರು ನೀಡಲಾಗಿದೆ.