ಇತಿಹಾಸದಲ್ಲೇ 300 ರೂ. ದಾಟಿದ ಪೆಟ್ರೋಲ್ ಬೆಲೆ!

ಶನಿವಾರ, 2 ಸೆಪ್ಟಂಬರ್ 2023 (08:02 IST)
ಇಸ್ಲಾಮಾಬಾದ್ : ಪಾಕಿಸ್ತಾನದಲ್ಲಿ ಗಗನಕ್ಕೇರುತ್ತಿರುವ ವಿದ್ಯುತ್ ಶುಲ್ಕದ ಆಕ್ರೋಶದ ನಡುವೆಯೇ ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ನ ಬೆಲೆ ಇತಿಹಾಸದಲ್ಲೇ ಮೊದಲ ಬಾರಿಗೆ ಲೀಟರ್ಗೆ 300 ಪಾಕಿಸ್ತಾನ ರೂಪಾಯಿ ದಾಟಿದೆ.

ಪ್ರಧಾನಮಂತ್ರಿ ಅನ್ವಾರುಲ್ ಹಕ್ ಕಾಕರ್ ನೇತೃತ್ವದ ಉಸ್ತುವಾರಿ ಸರ್ಕಾರ ಗುರುವಾರ ಪೆಟ್ರೋಲ್ ಅನ್ನು ಲೀಟರ್ಗೆ 14.91 ರೂ. ಹಾಗೂ ಹೈಸ್ಪೀಡ್ ಡೀಸೆಲ್ ಬೆಲೆಯನ್ನು 18.55 ರೂ.ಯಷ್ಟು ಹೆಚ್ಚಿಸಿದೆ. ಇದು ಭೀಕರ ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿ ಹೋಗಿರುವ ಪಾಕ್ ಜನತೆಗೆ ಸರ್ಕಾರ ಮತ್ತೊಂದು ಶಾಕ್ ನೀಡಿದೆ

ಪಾಕಿಸ್ತಾನದಲ್ಲಿ ಬೆಲೆ ಏರಿಕೆಗಳಿಂದಾಗಿ ಇದೀಗ ಪೆಟ್ರೋಲ್ ಬೆಲೆ 305.36 ರೂ.ಗೆ ತಲುಪಿದೆ. ಡೀಸೆಲ್ ಬೆಲೆ 311 ರೂ. ಆಗಿದೆ.  ದೇಶದಲ್ಲಿ ಇತ್ತೀಚೆಗೆ ವಿದ್ಯುತ್ ಬಿಲ್ನಲ್ಲಿ ಶುಲ್ಕ ಹೆಚ್ಚಳವಾಗುತ್ತಿರುವ ಹಿನ್ನೆಲೆ ಜನರು ಭಾರೀ ಪ್ರತಿಭಟನೆ ನಡೆಸಿದ್ದಾರೆ. ಆನೇಕ ಕಡೆ ಬೃಹತ್ ಮೆರವಣಿಗೆ ನಡೆಸಿ ವಿದ್ಯುತ್ ಬಿಲ್ಗಳನ್ನು ಸುಟ್ಟು ಹಾಕಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ