ಪೊನ್ನಂಪೇಟೆ ‌ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಮಾಲೋಚನಾ ಸಭೆ

ಬುಧವಾರ, 22 ಡಿಸೆಂಬರ್ 2021 (19:57 IST)
ಗೋಣಿಕೊಪ್ಪಲು ಕಾಮತ್  ನವಮಿ ಸಭಾಂಗಣದಲ್ಲಿ ಇಂದು ಜಿಲ್ಲಾ ನೂತನ ಕನ್ನಡ ಸಾಹಿತ್ಯ ಪರಿಷತ್ತ್ ಅಧ್ಯಕ್ಷ ಕೇಶವ ಕಾಮತ್ ಅವರ ಅಧ್ಯಕ್ಷತೆಯಲ್ಲಿ ತಾಲೂಕು ಘಟಕದ ಸಮಾಲೋಚನಾ ಸಭೆ ನಡೆಯಿತು. ಮಾಜಿ ಕನ್ನಡ ಸಾಹಿತ್ಯ ಪರಿಷತ್ತ್ ಅಧ್ಯಕ್ಷರಾದ ಟಿ.ಪಿ ರಮೇಶ್ ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದರು. ಪೊನ್ನಂಪೇಟೆ ತಾಲೂಕು ನಿಕಟಪೂರ್ವ ಅಧ್ಯಕ್ಷ ಡಾ ಚಂದ್ರಶೇಖರ್ ಅವರ ಉಪಸ್ಥಿತಿಯಲ್ಲಿ ಸಭೆ ನಡೆಯಿತು.  ಸಭೆಯಲ್ಲಿ ಹಲವರು ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದರು. ಕೋಳೆರ ಜಯ ಜಂಗಪ್ಪ, ಬಾಲಕೃಷ್ಣ ರೈ, ನಾರಯಣ ಸ್ವಾಮಿ ನಾಯ್ಡು, ಬಿ.ಟಿ‌ ಶ್ರೀನಿವಾಸ್, ಡಾ|| ಜಿ ಸೋಮಣ್ಣ, ಶ್ರೀಧರ್ ನೆಲ್ಲಿತ್ತಾಯ ಮತ್ತಿತ್ತರರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಪೊನ್ನಂಪೇಟೆ ತಾಲೂಕು ಘಟನಾ ರಚನೆ, ತಾಲೂಕಿನಲ್ಲಿ ಸಾಹಿತ್ಯ ಪರಿಷತ್ತಿನ ಮುಂದಿನ ಕೆಲಸ ಕಾರ್ಯಗಳ ರೂಪುರೇಷೆ, ಪರಿಷತ್ತಿನ ಕಾರ್ಯವ್ಯಾಪ್ತಿಯ ವಿಸ್ತರಣೆ ಕುರಿತು ಈ ಸಂದರ್ಭ ಸಮಾಲೋಚಿಸಲಾಯಿತು.  ಸಮಾಲೋಚನೆಯ ನಂತರ ಮಾತನಾಡಿದ ಕೇಶವ ಕಾಮತ್ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಬೆಳವಣಿಗೆಗೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡುವುದಾಗಿ ಹೇಳಿದರು. ಹಾಗೆಯೇ ಹೋಬಳಿ ಮಟ್ಟದ ಘಟಕಗಳನ್ನು ತಾಲೂಕು ಘಟಕಗಳ ಸ್ಥಾಪನೆಯ ನಂತರ ಮಾಡಲಾಗುವುದು, ಬೈಲಾದಲ್ಲಿ ಹೋಬಳಿ ಮಟ್ಟದ ಘಟಕ ಸ್ಥಾಪನೆಗೆ ಅವಕಾಶ ಇಲ್ಲ.  ಮುಂಬರು ಫೆಬ್ರವರಿಯಲ್ಲಿ ನಡೆಯುವ ರಾಜ್ಯ ಮಟ್ಟದ ಸಭೆಯಲ್ಲಿ ಈ ಕುರಿತು ವಿಷಯ ಪ್ರಸ್ತಾಪಿಸಿ ಹೋಬಳಿ ಮಟ್ಟದ ಘಟಕಕ್ಕೆ ಅವಕಾಶ ನೀಡುವಂತೆ ಕೋರಿಕೊಳ್ಳಲಾಗುವುದು, ಬೈಲಾದಲ್ಲಿ ಇರುವಂತೆ ಕಾರ್ಯಚಟುವಟಿಕೆ ಮಾಡಲಾಗುತ್ತದೆ ಎಂದು ಈ ಸಂದರ್ಭ ಅವರು ಹೇಳಿದರು. ಈ ಸಂದರ್ಭ ಸಭೆಯಲ್ಲಿರುವ ಪ್ರಮುಖರ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯರೂಪಕ್ಕೆ ಬರುವಂತೆ ಕೆಲಸ ನಿರ್ವಹಿಸುವ ವಿಶ್ವಾಸ ವ್ಯಕ್ತಪಡಿಸಿದ ಕೇಶವ್ ಕಾಮತ್ ಅವರು. ಮುಂಬರುವ ದಿನಗಳಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರೆಯುವುದಾಗಿ ಹೇಳಿದರು‌. ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ವಿಸ್ತರಣೆ ಹಾಗೂ ರಾಜ್ಯ ಅಧ್ಯಕ್ಷರಾದ ಜೋಷಿಯವರ ರಾಜ್ಯದಲ್ಲಿರುವ ಒಟ್ಟು ಎಪ್ಪತ್ತು ಸಾವಿರ ಸದಸ್ಯರ ಸಂಖ್ಯೆಯನ್ನು ಒಂದು ಕೋಟಿಗೆ ಏರಿಸುವಲ್ಲಿ ಜಿಲ್ಲೆಯಲ್ಲಿಯೂ ಬೃಹತ್ ಸದಸ್ಯತ್ವ ಅಭಿಯಾನ ಮಾಡಿ ಅವರ ಗುರಿ ಮುಟ್ಟಲು ಜಿಲ್ಲೆಯಿಂದ ಗಮನಾರ್ಹ ಸೇವೆಸಲ್ಲಿಸುವ ಕುರಿತು ಆಶಯ ವ್ಯಕ್ತಪಡಿಸಿದರು. ಆ ನಿಟ್ಟಿನಲ್ಲಿ ಕೆಲಸ ನಿರ್ವಹಿಸುವ ಮೂಲಕ ಕೊಡಗಿನಲ್ಲಿ ಬಲಿಷ್ಠ ಸಂಘಟನೆ ಕಟ್ಟುವ ಕೆಲಸವನ್ನು ನಾವೆಲ್ಲ ಮಾಡೋಣ ಎಂದರು. ಕಾರ್ಯಕ್ರಮವನ್ನು ಶೀಲಾಬೋಪಣ್ಣ ನಿರೂಪಿಸಿ, ಜಗದೀಶ್ ಜೋಡುಬೆಟ್ಟಿ ವಂದಿಸಿದರು, ಮೊದಲಿಗೆ ಎಲ್ಲರನ್ನೂ ನಾರಯಣ ಸ್ವಾಮಿ ನಾಯ್ಡು ಸ್ವಾಗತಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ