ಸುಧಾಕರ್ ಸ್ವೀಕರಿಸಿಲ್ಲ, ಅದಕ್ಕೆ ಹಾಗಾಗಿ ನಾನು ರಾಜೀನಾಮೆ ನೀಡಲ್ಲ: ನೆಪ ಕೊಟ್ಟ ಪ್ರದೀಪ್ ಈಶ್ವರ್

Krishnaveni K

ಶುಕ್ರವಾರ, 14 ಜೂನ್ 2024 (12:40 IST)
ಬೆಂಗಳೂರು: ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ ಕೆ ಸುಧಾಕರ್ ಒಂದೇ ಒಂದು ಮತದ ಅಂತರದಿಂದ ಗೆದ್ದರೂ ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆಂದಿದ್ದ ಶಾಸಕ ಪ್ರದೀಪ್ ಈಶ್ವರ್ ಈಗ ಉಲ್ಟಾ ಹೊಡೆದು ಟ್ರೋಲ್ ಗೊಳಗಾಗಿದ್ದಾರೆ.

ಚುನಾವಣೆ ಫಲಿತಾಂಶದ ಬಳಿಕ ಕೆಲವು ಸಮಯ ಪ್ರದೀಪ್ ಈಶ್ವರ್ ಪತ್ತೆಯೇ ಇರಲಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಅವರು ಸಾಕಷ್ಟು ಟ್ರೋಲ್ ಗೊಳಗಾಗುತ್ತಲೇ ಇದ್ದರು. ಸುಧಾಕರ್ ಭಾರೀ ಅಂತರದಿಂದ ಗೆದ್ದಾಯ್ತು ನಿಮ್ಮ ರಾಜೀನಾಮೆ ಯಾವಾಗ ಎಂದು ಪ್ರದೀಪ್ ಈಶ್ವರ್ ಗೆ ಜನ ಕೇಳುತ್ತಲೇ ಇದ್ದರು.

ಇದೀಗ ಪ್ರದೀಪ್ ಈಶ್ವರ್ ಕೊನೆಗೂ ಮಾಧ್ಯಮದ ಮುಂದೆ ಕಾಣಿಸಿಕೊಂಡಿದ್ದಾರೆ. ರಾಜೀನಾಮೆ ಬಗ್ಗೆ ಕೇಳಿದಾಗ ಸುಧಾಕರ್ ನನ್ನ ಸವಾಲನ್ನೇ ಸ್ವೀಕರಿಸಿಲ್ಲ. ಹೀಗಾಗಿ ನಾನು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ. ಇದಕ್ಕೆ ಮತ್ತೊಮ್ಮೆ ಅವರು ಟ್ರೋಲ್ ಆಗುವುದಂತೂ ಖಂಡಿತಾ.

ನನ್ನ ರಾಜೀನಾಮೆಗೆ ಆಗ್ರಹಿಸಿದ ಬಿಜೆಪಿಯವರಿಗೆ ಧನ್ಯವಾದ. ಸುಧಾಕರ್ ನನ್ನ ಸವಾಲು ಸ್ವೀಕರಿಸಿಯೇ ಇಲ್ಲ. ಒಂದು ಸುಧಾಕರ್ ಸವಾಲು ಸ್ವೀಕರಿಸಿದ್ದರೆ ಖಂಡಿತಾ ರಾಜೀನಾಮೆ ನೀಡುತ್ತಿದ್ದೆ ಎಂದಿದ್ದಾರೆ.  ಚುನಾವಣೆಯಲ್ಲಿ ಸೋಲು-ಗೆಲುವು ಸಹಜ. ಬಿಜೆಪಿಯವರು ನಾನು ರಾಜೀನಾಮೆ ನೀಡುವುದನ್ನೇ ಕಾಯ್ತಿದ್ದಾರೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ