ನಾಮಪತ್ರ ಸಲ್ಲಿಕೆ ದಿನಾಂಕ ಬರೆಯುವಾಗ ಎಡವಟ್ಟು ಮಾಡಿದ ಪ್ರಕಾಶ್ ರಾಜ್
ನಾಮಪತ್ರ ಸಲ್ಲಿಸುವ ಆಹ್ವಾನ ಪತ್ರಿಕೆಯಲ್ಲಿ 22-3-2019 ಎಂದು ದಿನಾಂಕ ಬರೆಯುವ ಬದಲು 2009 ಎಂದು ಬರೆದು ಎಡವಟ್ಟು ಮಾಡಿಕೊಂಡಿದ್ದರು. ತಪ್ಪು ಗೊತ್ತಾಗುತ್ತಿದ್ದಂತೇ ಸರಿಪಡಿಸಿಕೊಂಡರು. ಆದರೆ ಅಷ್ಟರಲ್ಲಾಗಲೇ ಟ್ರೋಲಿಗರು ‘ಪ್ರಕಾಶ್ ರಾಜ್ ಎಷ್ಟು ಮೊದಲೇ ನಾಮಪತ್ರ ಸಲ್ಲಿಸಿದ್ದಾರೆ ನೋಡ್ರಪ್ಪಾ’ ಎಂದು ಕಾಲೆಳೆದಾಗಿತ್ತು.
ಇಂದು 9 ಗಂಟೆಯಿಂದ ರಿಚ್ಮಂಡ್ ವೃತ್ತ ಮೂಲಕವಾಗಿ ಮೆರವಣಿಗೆ ಮೂಲಕ ಬಿಬಿಎಂಪಿ ಕೇಂದ್ರ ಕಚೇರಿಗೆ ತೆರಳಿ ಬಳಿಕ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಲಿದ್ದಾರೆ.