ಮದುವೆಯಾಗಿಒಂದುಮಗುವಾದಮೇಲೆಮಗುವಿನಆರೈಕೆಯಲ್ಲಿ ಹೆಣ್ಣುಮಕ್ಕಳುತುಂಬಾಬ್ಯುಸಿಯಾಗಿಬಿಡುತ್ತಾರೆ. ಅವರಿಗೆಪತಿಯಜೊತೆರೊಮ್ಯಾನ್ಸ್ಮಾಡಲುಸಮಯವಿರುವುದಿಲ್ಲ. ಇದರಿಂದನಿಮ್ಮದಾಂಪತ್ಯಜೀವನಬೇಸರವನ್ನುಂಟು ಮಾಡಬಹುದು. ಆದ್ದರಿಂದಅಮ್ಮನಾದಮೇಲೂಪತಿಯಜೊತೆರೊಮ್ಯಾಂಟಿಕ್ಆಗಿಇರುವುದುಹೇಗೆ ಎನ್ನುವುದನ್ನು ನೋಡೋಣ.
*ಮಗುವಿಗೆ ಸಾಧ್ಯವಾದಷ್ಟು ಬೇಗ ನಿದ್ರೆ ಮಾಡಿಸಿ. ಇದರಿಂದ ಮಕ್ಕಳ ಆರೋಗ್ಯವೂ ಉತ್ತಮವಾಗಿರುತ್ತದೆ. ಮಗು ಬೇಗನೆ ಮಲಗಿದರೆ ದಂಪತಿ ಸುಖ ದುಃಖ ಹಂಚಿ ಕೊಳ್ಳಲು, ರೊಮ್ಯಾನ್ಸ್ ಮಾಡಲು ಎಲ್ಲದಕ್ಕೂ ಸಮಯ ಸಿಗುತ್ತದೆ. ಇದರಿಂದ ದಂಪತಿ ವೈವಾಹಿಕ ಜೀವನವೂ ಉತ್ತಮವಾಗಿರಲು ಸಹಾಯವಾಗುತ್ತದೆ.
* ಮಗು ದೊಡ್ಡದಾಗಿದ್ದರೆ ಅವರಿಗಾಗಿ ಬೇರೆ ರೂಮ್ ಮಾಡಿ. ಇದರಿಂದ ನಿಮಗೆ ಪ್ರೈವೇಸಿ ಸಿಗುತ್ತದೆ.
* ವಾರದಲ್ಲಿ ಒಂದು ಬಾರಿಯಾದರೂ ಪತಿ-ಪತ್ನಿ ಜೊತೆಯಾಗಿ ಎಲ್ಲಾದರೂ ಹೊರಗೆ ಹೋಗಿ. ಇದನ್ನು ಜೀವನದ ಕೊನೆಯವರೆಗೂ ಮುಂದುವರೆಸಿಕೊಂಡು ಹೋದರೆ ಉತ್ತಮ.
* ಆಗಾಗ ಸಂಗಾತಿಗೆ ಗಿಫ್ಟ್ ಕೊಡಲು ಮರೆಯಬೇಡಿ. ಗಿಫ್ಟ್ ಕೊಡುತ್ತ ಹೋದರೆ ಸಂಬಂಧ ಗಟ್ಟಿಯಾಗುತ್ತಾ ಹೋಗುತ್ತದೆ.