ಡಿಕೆಶಿ ಕಾಲಿಗೆ ಇದಕ್ಕಾಗೇ ಬಿದ್ದಿದ್ದು ಎಂದ ಪ್ರತಾಪ ಸಿಂಹ

ಗುರುವಾರ, 2 ಮೇ 2019 (17:59 IST)
ಧರ್ಮವನ್ನು ಒಡೆಯೋದು ತಪ್ಪಲ್ಲ, ಆದರೆ ಯಾವುದೋ ಲೆಟರ್ ಹೆಡ್ ತಪ್ಪೆಂದು‌  ಜೈಲಿಗೆ ಕಳಿಸೋದು ಎಷ್ಟರ ಮಟ್ಟಿಗೆ ಸರಿ  ಅಂತ ಗೃಹ ಸಚಿವ ಎಂ.ಬಿ.ಪಾಟೀಲ್ ಗೆ ಟಾಂಗ್ ನೀಡಿದ್ದಾರೆ ಪ್ರತಾಪ್ ಸಿಂಹ.

ಪರಪ್ಪನ ಅಗ್ರಹಾರದಲ್ಲಿರುವ ಪತ್ರಕರ್ತ ಹೇಮಂತ್ ಭೇಟಿಯಾದ ಸಂಸದ ಪ್ರತಾಪ್ ಸಿಂಹ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿ ಟಾಂಗ್ ನೀಡಿದ್ರು.

ಧರ್ಮ ಒಡೆಯೋದಕ್ಕೆ ಹೋಗಿಲ್ಲವೆಂದು ಹೇಳಿಕೆ ನೀಡುವ ಧೈರ್ಯ ಎಂ.ಬಿ. ಪಾಟೀಲ್ ಗೆ ಇದೆಯಾ? ಎಂದು ಪ್ರತಾಪ್ ಪ್ರಶ್ನೆ ಮಾಡಿದ್ರು.

ಇನ್ನು, ನಿನ್ನೆಯ ಜಿ.ಟಿ.ದೇವೆಗೌಡರ ಹೇಳಿಕೆ ಕಾಂಗ್ರೆಸ್ ಎಲ್ಲೂ ಕೂಡ ಮೈತ್ರಿ ಧರ್ಮ ಪಾಲಿಸಿಲ್ಲವೆಂದ ಪ್ರತಾಪ್ ಸಿಂಹ ಹೇಳಿದ್ರು.
ಸಚಿವ ಡಿ.ಕೆ.ಶಿವಕುಮಾರ್ ಕಾಲಿಗೆ ಬಿದ್ದ ಬಗ್ಗೆ ಕೇಳಿದಕ್ಕೆ ಹಿರಿಯರು ಯಾರೇ ಸಿಕ್ಕರೂ ಅವರ ಆಶೀರ್ವಾದ ಪಡೆಕೊಳ್ಳುತ್ತೇನೆ. ಖರ್ಗೆ, ವೀರಪ್ಪ ಮೊಯ್ಲಿ, ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯರವರಿಗೂ ನಮಸ್ಕಾರ ಮಾಡಿದ್ದೇನೆಂದು ಪ್ರತಾಪ್ ಸಿಂಹ ಸಮರ್ಥಿಸಿಕೊಂಡಿದ್ದಾರೆ. ಎಂ.ಬಿ.ಪಾಟೀಲರ ನಕಲಿ ಲೆಟರ್ ಹೆಡ್ ಬಳಸಿರುವ ಆರೋಪದಲ್ಲಿ ಪತ್ರಕರ್ತ ಹೇಮಂತ್ ಬಂಧನವಾಗಿದೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ