ಕುಂಭಮೇಳ ಕಾಲ್ತುಳಿತದಲ್ಲಿ ಮಡಿದವರ ಚಿನ್ನಾಭರಣಗಳೂ ಸುರಕ್ಷಿತವಾಗಿ ವಾಪಸ್: ಕುಟುಂಬಸ್ಥರ ಸ್ಪಷ್ಟನೆ

Krishnaveni K

ಬುಧವಾರ, 5 ಫೆಬ್ರವರಿ 2025 (11:22 IST)
ಪ್ರಯಾಗ್ ರಾಜ್: ಕುಂಭಮೇಳದಲ್ಲಿ ಕಾಲ್ತುಳಿತದಲ್ಲಿ ಸಾವನ್ನಪ್ಪಿದ ನಮ್ಮ ಕುಟುಂಭ ಸದಸ್ಯರ ಚಿನ್ನಾಭರಣವನ್ನೂ ಸುರಕ್ಷಿತವಾಗಿ ಮರಳಿಸಿದ್ದಾರೆ ಎಂದು ಬೆಳಗಾವಿ ಸಂತ್ರಸ್ತರ ಕುಟುಂಬಸ್ಥರು ಸ್ಪಷ್ಟನೆ ನೀಡಿದ್ದಾರೆ.

ಕುಂಭಮೇಳದಲ್ಲಿ ಸಾವನ್ನಪ್ಪಿದವರ ಸಂಖ್ಯೆಯನ್ನು ಉತ್ತರ ಪ್ರದೇಶ ಸರ್ಕಾರ ಮರೆ ಮಾಚಿದೆ, ಕುಂಭಮೇಳವನ್ನು ವ್ಯವಸ್ಥಿತವಾಗಿ ಆಯೋಜಿಸಿಲ್ಲ ಎಂದು ಟೀಕೆ ಮಾಡುವವರಿಗೆ ಬೆಳಗಾವಿಯ ಸಂತ್ರಸ್ತರ ಕುಟುಂಬದ ಸದಸ್ಯರೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ತಿರುಗೇಟು ನೀಡಿದ್ದಾರೆ.

ಕುಂಭಮೇಳದಲ್ಲಿ ಮೌನಿ ಅಮವಾಸ್ಯೆ ದಿನ ಸಾವನ್ನಪ್ಪಿದವರಲ್ಲಿ ಬೆಳಗಾವಿ ಮೂಲದ ನಾಲ್ವರು ಸೇರಿದ್ದರು. ಈ ಪೈಕಿ ಓರ್ವ ಅಮ್ಮ, ಮಗಳೂ ಇದ್ದರು. ಅವರ ಕುಟುಂಬದವರೊಬ್ಬರು ಈಗ ಸೋಷಿಯಲ್ ಮೀಡಿಯಾದಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಗುರುರಾಜ್ ಹುಡಿದಾರ್ ಎಂಬವರು ಕುಂಭಮೇಳದ ಆಯೋಜನೆ ಬಗ್ಗೆ ಟೀಕೆ ಮಾಡುವವರಿಗೆ ತಿರುಗೇಟು ನೀಡಿದ್ದಾರೆ. ನನ್ನ ಅಕ್ಕ ಮತ್ತು ಅಕ್ಕನ ಮಗಳು ಕಾಲ್ತುಳಿತದಲ್ಲಿ ತೀರಿಹೋದರು ಅವರ ಶವಗಳ ಜೊತೆಗೆ ಅವರು ಧರಿಸಿದ ಎಲ್ಲಾ ಆಭರಣಗಳು 1800 ನೂರು ಕಿ.ಮೀ. ದೂರದ ನಮ್ಮ ಮನೆಗೆ ಬಂದು ಸೇರಿದವು. ಇದು ಪ್ರಾಮಾಣಿಕತೆಯ ಉದಾಹರಣೆ ಜೊತೆಗೆ ಅಲ್ಲಿ ವ್ಯವಸ್ಥೆ ಎಷ್ಟು ಅಚ್ಚುಕಟ್ಟಾಗಿದೆ ಎಂದು ಸೂಚಿಸುತ್ತದೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ