ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಪ್ರಿಯಾಂಕ್ ಖರ್ಗೆ
ಪಾಪ ಕಳೆದುಕೊಳ್ಳುವುದಕ್ಕೆ ಕಾಶಿಗೆ ಹೋಗಬೇಕಾಗಿಲ್ಲ ಕೇಸರಿ ಶಾಲು ಹಾಕಿದರೆ ಸಾಕು ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.ಮಾಜಿ ರೌಡಿಗಳು ಬಿಜೆಪಿಗೆ ಸೇರ್ಪಡೆ ವಿಚಾರವಾಗಿ ಕೆಪಿಸಿಸಿ ಕಛೇರಿಯಲ್ಲಿ ಮಾತನಾಡಿದ ಅವರು ರಾಷ್ಟ್ರದಲ್ಲಿ ದೊಡ್ಡ ಕಳ್ಳರು, ಚಿಕ್ಕ ಕಳ್ಳರು ಬಿಜೆಪಿಗೆ ಸೇರ್ಪಡೆ ಆಗುತ್ತಿದ್ದಾರೆ.ಬಿಜೆಪಿ ಶಾಲು ಹಾಕಿಕೊಂಡರೆ ಪಾಪಗಳು ಪರಿಹಾರ ಆಗುತ್ತವೆ.ಕಾಶಿ ವರೆಗೆ ಹೋಗಬೇಕಿಲ್ಲ, ಇಲ್ಲೇ ಪರಿಹಾರ ಆಗುತ್ತೆ.ಕಾನೂನು ಬಾಹಿರ, ಸಂವಿಧಾನ ವಿರೋಧಿ ಚಟುವಟಿಕೆ ಮಾಡಿದ್ರೆ ನಿಮ್ಮಷ್ಟು ಪುಣ್ಯವಂತ ಯಾರೂ ಇಲ್ಲ.ಸಿಸಿಬಿ ಹುಡುಕಿದರೂ ರೌಡಿ ಗಳು ಅವರಿಗೆ ಸಿಕ್ತಿಲ್ಲ, ತೇಜಸ್ವಿ ಸೂರ್ಯ ಪಕ್ಕಇರ್ತಾರೆ.ಬಿಜೆಪಿಯರಿಗೆ ಕೇಳಿದರೆ ಹೇಳಬಹುದು, ಫೈಟರ್ ಎಲ್ಲಿ? ಸೈಲೆಂಟ್ ಎಲ್ಲಿ? ಸೈಕಲ್ ಎಲ್ಲಿ? ಬ್ಲೇಡ್ ಎಲ್ಲಿ ಎಂದು ಗೊತ್ತಾಗುತ್ತೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.