ಫ್ರೀಡಂ ಪಾರ್ಕ್ ನಲ್ಲಿ ಕನ್ಹಯ್ಯ ಹತ್ಯೆ ಖಂಡಿಸಿ ಧರಣಿ
ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದಿಂದ ನಗರದ ಪ್ರಿಡಂ ಪಾರ್ಕ್ ನಲ್ಲಿ ರಾಜಸ್ಥಾನದಲ್ಲಿ ನಡೆದ ಕನ್ಹಯ್ಯ ಹತ್ಯೆ ಖಂಡಿಸಿ ಪ್ರತಿಭಟನೆ ಮಾಡಲಾಯಿತು. ಪ್ರತಿಭಟನೆಯಲ್ಲಿ ಎಮ್ ಎಲ್ ಸಿ ಎನ್ ರವಿಕುಮಾರ್, ಬಿಜೆಪಿ ಕಾರ್ಯದರ್ಶಿ ಜಗದೀಶ್ ಹಿರೇಮನಿ ಭಾಗಿ ಹಲವಾರು ಮುಸ್ಲಿಂ ಮಹಿಳೆಯರು ಪ್ರತಿಭಟನೆಯಲ್ಲಿ ಭಾಗಿ ಆಗಿದ್ರು ಪ್ರತಿಭಟನೆ ಉದ್ಧೇಶಿಸಿ ಮಾತನಾಡಿದ ಎಮ್ ಎಲ್ ಸಿ ರವಿಕುಮಾರ್ ಕನ್ಹಯ್ಯ ಹತ್ಯೆ ಮಾಡಿದವರನ್ನು ರಸ್ತೆ ಮಧ್ಯೆ ನೇಣಿಗೆ ಹಾಕಬೇಕು, ಅವರೇ ವಿಡಿಯೊ ಮಾಡಿದ್ದಾರೆ ನಾವೇ ಹತ್ಯೆ ಮಾಡಿದ್ದೇವೆ ಎಂದು ಹೇಳಿದ್ದಾರೆ ಹೀಗಾಗಿ ಇನ್ನೂ ಇದರಲ್ಲಿ ತನಿಖೆ ಮಾಡೋದು ಏನಿದೆ. ಮೋದಿಯನ್ನು ಹೀಗೆ ಕೊಲ್ಲೋದಾಗಿ ಹೇಳಿದ್ದಾರೆ. ಎಷ್ಟು ಧಮ್ ಇರಬೇಕು, ಎಷ್ಟು ಸೊಕ್ಕು ಇರಬೇಕು ಇವರಿಗೆ . ಇದು ಇಡಿ ಭಾರತವೇ ತಲೆ ತಗ್ಗಿಸಬೇಕಿದೆ ಇದು ಕಾಂಗ್ರೆಸ್ ಕೈವಾಡ ನೀವೆ ಬೆಳೆಸಿದ ಕೂಸು. ಮೊದಲೇ ಇದನ್ನು ಚಿವುಟಿ ಹಾಕಿದ್ದರೆ ಹೀಗೆ ಆಗ್ತಾ ಇರಲಿಲ್ಲ.ನಾನು ರಾಹುಲ್ ಗಾಂಧಿಗೆ ಮತ್ತು ರಾಜ್ಯದ ಮಹಾನ್ ಸೆಕ್ಯುಲರ್ ಲೀಡರ್ ಸಿದ್ದರಾಮಯ್ಯ ಯಾಕೆ ಪ್ರತಿಭಟನೆ ಮಾಡಿಲ್ಲ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಹಗರಣದಲ್ಲಿ ಮನೆಯಲ್ಲಿ ಇದ್ದವರನ್ನೆಲ್ಲಾ ಕರೆದು ಹೋರಾಟ ಮಾಡಿದ್ರಿ.ಈಗ ಯಾಕಿಲ್ಲ.ನಿಮ್ಮ ಪಕ್ಷದ ಅಲ್ಪಸಂಖ್ಯಾತ ಮೋರ್ಚಾ ಎಲ್ಲಿಗೆ ಹೋಗಿದೆ ಸಿದ್ದರಾಮಯ್ಯಗೆ ನಾಚೀಕೆ ಆಗಬೇಕು ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ರು.