ಪುನೀತ್ ಹುಟ್ಟಿದ ಹಬ್ಬ: ಸಮಾಧಿಗೆ ವಿಶೇಷ ನಮನ ಸಲ್ಲಿಸಿದ ರಾಜ್ ಕುಟುಂಬ

Sampriya

ಭಾನುವಾರ, 17 ಮಾರ್ಚ್ 2024 (17:02 IST)
Photo Courtesy Facebook
ಬೆಂಗಳೂರು: ಇಂದು ಕರ್ನಾಟಕ ಯುವರತ್ನ ದಿ. ಡಾ.ಪುನೀತ್ ರಾಜಕುಮಾರ್ ಅವರ  49ನೇ ಹುಟ್ಟಿದ ಹಬ್ಬ ಹಿನ್ನೆಲೆ ರಾಜ್ ಕುಟುಂಬದವರು ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ಸಮಾಧಿಗೆ ವಿಶೇಷ ನಮನ ಸಲ್ಲಿಸಿದರು.  
 
ಸಹೋದರ ರಾಘವೇಂದ್ರ ರಾಜಕುಮಾರ್, ಪುತ್ರರಾದ ಯುವರಾಜ್, ವಿನಯ್ ಹಾಗೂ ಪುನೀತ್ ಮಗಳು ವಂದಿತಾ ಪುಷ್ಪ ನಮನ ಸಲ್ಲಿಸಿದರು. ಪುನೀತ್ ಸಮಾಧಿ ಬಳಿ ಇಂದು ಅವರ ಅಭಿಮಾನಿಗಳ ದಂಡೇ ಜಮಾಯಿಸಿತ್ತು. ತಮ್ಮ ನೆಚ್ಚಿನ ನಟನಿಗೆ ನಮಸ್ಕರಿಸಿದರು. 
 
ಇನ್ನೂ ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರು ಅಪ್ಪು ಯಾವುದೇ ಕಾರ್ಯಕ್ರಮವನ್ನು ಮಿಸ್ ಮಾಡುವುದು ತುಂಬಾನೇ ಕಡಿಮೆ.  ಆದರೆ ಇಂದು ಪುನೀತ್​ರ ಹುಟ್ಟುಹಬ್ಬಕ್ಕೆ ಅಶ್ವಿನಿ ಅವರು ಗೈರಾಗಿದ್ದರು. ಅವರ ಅನುಪಸ್ಥಿತಿಯಲ್ಲಿ ಅವರ ಪುತ್ರಿ, ಪೂಜೆ ಕಾರ್ಯಗಳನ್ನು ನೆರವೇರಿಸಿದರು.  
 
ಇನ್ನೂ ಅಶ್ವಿನಿ ಅವರು ಇಂದು ಬೆಂಗಳೂರಿನಲ್ಲಿ ಇರಲಿಲ್ಲ.  ದೊಡ್ಮನೆಯ ಕುಲದೇವತೆಯ ಪೂಜೆಯ ಸಲುವಾಗಿ ಮುಂಬೈಗೆ ತೆರಳಿದ್ದರು. ಪುನೀತ್​ರ ಹುಟ್ಟುಹಬ್ಬದ ದಿನದಂದೇ ಮುಂಬೈನ ವಜ್ರೇಶ್ವರಿ ದೇವಾಲಯಕ್ಕೆ ತೆರಳಿ ಪೂಜೆ ಮಾಡಿಸಿದ್ದಾರೆ. ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರು ಚಿತ್ರರಂಗದಲ್ಲಿ ದಿಟ್ಟ ಹೆಜ್ಜೆಯೊಂದನ್ನು ಇಡಲು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದ್ದು, ಇದೇ ಕಾರಣಕ್ಕೆ ವಜ್ರೇಶ್ವರಿ ದೇವಿಗೆ ವಿಶೇಷ ಪೂಜೆ ಮಾಡಿಸುತ್ತಿದ್ದಾರೆ ಎನ್ನಲಾಗುತ್ತಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ