ರಾಹುಲ್‌ ಗಾಂಧಿ ಆಧುನಿಕ ರಾವಣ-ಬಿಜೆಪಿ ವ್ಯಂಗ್ಯ

ಶನಿವಾರ, 7 ಅಕ್ಟೋಬರ್ 2023 (17:00 IST)
ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಭಾರೀ ಜಟಾಪಟಿ ನಡೆಸುತ್ತಿರುವ ಹೊತ್ತಲ್ಲೇ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯನ್ನು ರಾವಣನ ಪಾತ್ರದಲ್ಲಿ ತೋರಿಸಿ ಸಿನಿಮಾವೊಂದರ ಪೋಸ್ಟರ್‌ ಎಂಬಂತೆ ಚಿತ್ರಿಸಿರುವ ಬಿಜೆಪಿ ಈ ಚಿತ್ರವನ್ನು ಜಾರ್ಜ್ ಸೊರೋಸ್‌ ನಿರ್ದೇಶನ ಮಾಡುತ್ತಿದ್ದಾರೆ ಎಂಬ ಪೋಸ್ಟರ್‌ವೊಂದನ್ನು ಬಿಡುಗಡೆ ಮಾಡಿ ವ್ಯಂಗ್ಯವಾಡಿದೆ. ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರವನ್ನು ಟ್ವೀಟ್‌ ಮಾಡಿದ್ದ ಕಾಂಗ್ರೆಸ್‌ ‘ದೊಡ್ಡ ಸುಳ್ಳುಗಾರ’ ಎಂಬ ಶೀರ್ಷಿಕೆ ನೀಡಿ ವ್ಯಂಗವಾಡಿತ್ತು. ಅಲ್ಲದೇ ‘ಜುಮ್ಲಾ ಬಾಯ್‌’ ನಾಟಕಕಾರ ಎಂದು ಟೀಕಿಸಿತ್ತು. ಇದರ ಬೆನ್ನಲ್ಲೇ ಪ್ರತೀಕಾರವಾಗಿ ಬಿಜೆಪಿ ಈ ಪೋಸ್ಟ್‌ ಬಿಡುಗಡೆ ಮಾಡಿದೆ ಎನ್ನಲಾಗ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ