ಸತತ ಮಳೆಯಿಂದ ಬೆಂಗಳೂರು ನಗರ ತೊಯ್ದು ತೊಪ್ಪೆಯಾಗಿದ್ದು, ಮಹದೇವಪುರ ವಲಯದ ಹೊರಮಾವು ಸಾಯಿ ಬಡಾವಣೆ, ನಾಗಪ್ಪರೆಡ್ಡಿ ಬಡಾವಣೆ, ರಾಮಮೂರ್ತಿ ನಗರ ಮುಖದಯರಸ್ತೆ, ಹೆಚ್ ಎ ಎಲ್ ಭಾಗದ ತಗ್ಗು ಪ್ರದೇಶ, ಸರ್ಜಾಪುರ ಮುಖ್ಯರಸ್ತೆ, ರೈನ್ ಬೊ ಬಡಾವಣೆ, ಬೆಳ್ಳಂದೂರು ಇಕೋಸ್ಪೇಸ್ ಮುಖ್ಯರಸ್ತೆ, ಬಳಗೆರೆ, ವರ್ತೂರು ಭಾಗಗಳಲ್ಲಿ ಹಲವು ಅಪಾರ್ಟ್ಮೆಂಟ್ ಗಳು ಜಲಾವೃತವಾಗಿವೆ, ಸರ್ಜಾಪುರ ಮುಖ್ಯರಸ್ತೆ ಯ ಬೆಳ್ಳಂಡೂರು ಇಕೋಸ್ಪೇಸ್ ಬಳಿ 4 ಅಡಿಗೂ ಹೆಚ್ಚು ನೀರು ರಸ್ತೆಯಲ್ಲಿ ಹರಿಯುತ್ತಿದ್ದು ವಾಹನ ಸವಾರರು ತೀವ್ರ ಪರಾದಾಡುತ್ತಿದ್ದಾರೆ, ವೈಟ್ ಫೀಲ್ಡ್ ನ ನಲ್ಲೂರಹಳ್ಳಿ ಯ ಡಿಎನ್ ಎ, ಜೈ ಫಾರ್ಚೂನ್ ಅಪಾರ್ಟಗಳು ಸಂಪೂರ್ಣ ಜಲಾವೃತವಾಗಿದ್ದು, ಅಗ್ನಿಶಾಮಕ ಸಿಬ್ಬಂದಿ ನೀರು ಹೊರಹಾಕಲು ಹರಸಾಹಸ ಪಡುತ್ತಿದ್ದು ,ಬೋಟ್ ಗಳ ಮುಖಾಂತರ ಜನರನ್ನು ಹೊರತರುತ್ತಿದ್ದಾರೆ.ಮಳೆ ಬಂದಾಗಷ್ಟೇ ಬರುವ ಅಧಿಕಾರಿ,ಜನಪ್ರತಿನಿಧಿಗಳು ರಾಜಾಕಾಲುವೆ ಒತ್ತುವರಿಯನ್ನು ತೆರವುಗೊಳಿಸಿ ಸಮಸ್ಯೆಗಳನ್ನು ಪರಿಹರಿಸಬೇಕಿದೆ.