ಮಳೆಗೆ ತತ್ತರಿಸಿದ ಬೆಂಗಳೂರು-ಪ್ರವಾಹ ತಪ್ಪಿಸಲು ಒತ್ತುವರಿ ತೆರವು ಕಾರ್ಯಾಚರಣೆ

ಮಂಗಳವಾರ, 20 ಸೆಪ್ಟಂಬರ್ 2022 (21:08 IST)
ಶ್ರೀಸಾಮಾನ್ಯರ ಮಂದೆ ಬಿಬಿಎಂಪಿ ಬುಲ್ಡೋಜರ್ ಪ್ರತಾಪ ಗಪ್ ಚುಪ್ ಆಗಿದೆ.ಅಸಲಿಗೆ ಬೆಂಗಳೂರು ಮುಳುಗಲು ಕಾರಣ ಯಾರು..? ಎಂಬುದು CAG ವರದಿಯಲ್ಲಿ ಮಾಹಿತಿ ಬಹಿರಂಗವಾಗಿದೆ.2021ರಲ್ಲೇ ಬಿಬಿಎಂಪಿ ಕಾರ್ಯ ವೈಖರಿ ಬಗ್ಗೆ ಸರ್ಕಾರಕ್ಕೆ CAG ಎಚ್ಚರಿಸಿತ್ತು.ಆದ್ರೆ ಈಗ ಬೆಂಗಳೂರಿನ ಸದ್ಯದ ಪರಿಸ್ಥಿತಿ ನೋಡಿದ್ರೆ ಮುಂದಕ್ಕೆ ಪ್ರವಾಹದ ಭವಿಷ್ಯವಾಗಬಹುದು ಎಂದು CAG ಆಡಿಟ್ ವರದಿ ಬಹಿರಂಗವಾಗಿದೆ
 
2021ರಲ್ಲಿ ರಾಜ್ಯ ಸರ್ಕಾರಕ್ಕೆ ಬೆಂಗಳೂರಿನ ಸ್ಥಿತಿಗತಿ ಬಗ್ಗೆ CAGಯಿಂದ 136 ಪುಟದ ಸವಿಸ್ತಾರ ಆಡಿಟ್ ವರದಿ ಸಲ್ಲಿಸಿತ್ತು.ವರದಿಯಲ್ಲಿ ಬಿಬಿಎಂಪಿ ಎಡವಟ್ಟು ಹಾಗೂ ಅಸಡ್ಡೆ ಬಗ್ಗೆ ಸಿಎಜಿ ಎತ್ತಿಹಿಡಿದಿದೆ.ಹೆಬ್ಬಾಳ - ನಾಗಾವರ ವ್ಯಾಲಿ, ಅರ್ಕಾವತಿ ವ್ಯಾಲಿ, ವೃಷಭಾವತಿ ವ್ಯಾಲಿ, ಸುವರ್ಣಮುಖಿ ವ್ಯಾಲಿ, ಕೋರಮಂಗಲ ವ್ಯಾಲಿ ಸೇರಿದಂತೆ ಭೌಗೋಳಿಕವಾಗಿ ಬೆಂಗಳೂರಿನ ಜೀವನಾಡಿಗಳಿರುವ ಈ ಐದು ವ್ಯಾಲಿಗಳನ್ನು ಉಳಿಸಿಕೊಳ್ಳಲು, ನಿರ್ವಹಣೆ ಮಾಡಲು ಪಾಲಿಕೆ ಎಡವಿದೆ.
 
ಐದು ವ್ಯಾಲಿಗಳನ್ನು ಸಮಪರ್ಕವಾಗಿ ನಿಭಾಯಿಸಿದಿದ್ದರೆ ಬೆಂಗಳೂರಿನಲ್ಲಿ ಮಳೆ ಹರಿವು ಹತೋಟಿಗೆ ತೆಗೆದುಕೊಳ್ಳಲು ಸಾಧ್ಯವಿಲ್ಲ.ಈ ಐದು ವ್ಯಾಲಿಗಳೂ ಕೂಡ ಮೂಲತಃ ಒಂದಕ್ಕೊಂದು ಸಂಪರ್ಕ ಬೆಸೆದುಕೊಂಡಿದೆ.ಅದಕ್ಕೆ ಧಕ್ಕೆಯಾಗುವ ರೀತಿಯಲ್ಲಿ ನಗರದಲ್ಲಿ ಒತ್ತುವರಿಯಾಗಿದೆ, ಇದನ್ನು ಬಿಬಿಎಂಪಿ ತಡೆಯಲಿಲ್ಲ.ಬೆಂಗಳೂರಿನಲ್ಲಿ ಮಳೆಯಿಂದಾಗುವ ಅನಾಹುತಗಳ ಬಗ್ಗೆ 2021ರಲ್ಲಿ ಎಚ್ಚರಿಸಿದರೂ ಪಾಲಿಕೆ ಮಾತ್ರ ಡೋಂಟ್ ಕೇರ್ ಎಂದಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ