ರಕ್ಷಾ ಬಂಧನ ವನ್ನು ರಾಖಿ ಎಂತಲೂ ಕರೆಯುತ್ತಾರೆ. ಅಣ್ಣ ತಂಗಿ ಕೈಗೆ ರಾಖಿಯನ್ನು ಕಟ್ಟಿ ಸದಾ ನಿನ್ನ ರಕ್ಷಣೆಗೆ ನಾನಿರುವೆ ಎಂದು ಸಾರುವುದು ರಕ್ಷಾಬಂಧನ ಹಬ್ಬದ ವಿಶೇಷ, ಹಾಗೆಯೇ ತಂಗಿಯು ಅಣ್ಣನ ಕೈಗೆ ರಕ್ಷಾಬಂಧನವನ್ನು ಕಟ್ಟಿ ಅಣ್ಣನಿಂದ ಆಶೀರ್ವಾದವನ್ನು ಪಡೆಯುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ಧತಿ. ಹಾಗೆಯೇ ಇಬ್ಬರು ಪರಸ್ಪರ ಉಡುಗೊರೆಯನ್ನು ನೀಡುತ್ತಾರೆ. ರಕ್ಷಾ ಬಂಧನ ಎಂದರೆ ರಕ್ಷೆ ಎಂದರೆ ರಕ್ಷಣೆ ಹಾಗೂ ಬಂಧನ ಎಂದರೆ ಸಂಬಂಧ ಎಂಬ ಅರ್ಥವನ್ನು ನೀಡುತ್ತದೆ.