ರಾಮನಗರದ ರಾಮಮಂದಿರ ಪಾಲಿಟಿಕ್ಸ್

ಮಂಗಳವಾರ, 28 ಮಾರ್ಚ್ 2023 (20:40 IST)
ಇದೀಗ ರಾಮನಗರದಲ್ಲಿ ರಾಮಮಂದಿರ ನಿರ್ಮಾಣ ಭೂಮಿ ಪೂಜೆಗೆ ಬಿಜೆಪಿ ಸರ್ಕಾರ ಮುಂದಾಗಿದೆ.ರಾಮಮಂದಿರ ಭೂಮಿ ಪೂಜೆಗೆ 40 ಲಕ್ಷ ರೂಪಾಯಿ ಬಿಡುಗಡೆ ಮಾಡಲಾಗಿದೆ.ಸಿಎಂ ಬೊಮ್ಮಾಯಿಯಿಂದ ಭೂಮಿ ಪೂಜೆಗೆ ಹಣ ಬಿಡುಗಡೆ ಮಾಡಿದ್ದಾರೆ. ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಅಶ್ವಥ್ ನಾರಾಯಣ್ ಯೋಜನೆ ವರದಿ ಪರಿಶೀಲನೆಗೆ ಮುಂದಾಗಿದ್ದಾರೆ.ಇಂದು ವಿಕಾಸಸೌಧದಲ್ಲಿ ಇಂದು ಮಧ್ಯಾಹ್ನ ಪ್ಲಾನಿಂಗ್ ಕಮಿಟಿ ಜೊತೆ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಅಶ್ವಥ್ ನಾರಾಯಣ್ ಸಭೆ ನಡೆಸಿದ್ದಾರೆ.ರಾಮಮಂದಿರ ನಿರ್ಮಾಣಕ್ಕೆ ಸಿದ್ಧಪಡಿಸಿರುವ ಯೋಜನೆ ಬಗ್ಗೆ ಸಭೆಯಲ್ಲಿ ಸಮಾಲೋಚನೆ ಬಳಿಕ ಮಾತನಾಡಿದ ಅವರು, ಬಹಳ ಕಾಲದಿಂದ ರಾಮನಗರದ ರಾಮದೇವರ ಬೆಟ್ಟದ ಅಭಿವೃದ್ಧಿ ಬಗ್ಗೆ ಚರ್ಚೆ ಆಗ್ತಿತ್ತು.ಆ ನಿಟ್ಟಿನಲ್ಲಿ ನಮ್ಮ ಸರ್ಕಾರ ಕ್ರಮ ವಹಿಸಿದೆ. ರಾಮಗನರ ಬೆಟ್ಟ ದಕ್ಷಿಣದ ಅಯೋಧ್ಯೆ ಎಂದು ಹೆಸರು ಪಡೆದಿದೆ...ಈ ರಾಮನಗರದ ಬೆಟ್ಟದ ಬಗ್ಗೆ ದಾಖಲೆ ಸಂಗ್ರಹ ಆಗಿದೆ..ಹೇಗೆಲ್ಲ ಅಭಿವೃದ್ಧಿ ಮಾಡಬಹುದು ಅನ್ನೋ ಲೆಕ್ಕಾಚಾರ ಹಾಕಿದ್ದೇವೆ.ಮುಜರಾಯಿ ಇಲಾಖೆಯಿಂದ ನಿರ್ಮಿತಿ ಕೇಂದ್ರಕ್ಕೆ ಡಿಪಿಆರ್ ತಯಾರಿಸಲು ಕಳುಹಿಸಿ ಕೊಡಲು ತೀರ್ಮಾನ ಆಗಲಿದೆಮುಜರಾಯಿ ಇಲಾಖೆಯ ಅನುಮತಿ, ಸಿಎಂ ಅನುಮತಿ ಪಡೆದು ಆದಷ್ಟು ಬೇಗ ಕಾರ್ಯ ಪ್ರವೃತ್ತರಾಗುತ್ತೇವೆ...ಕಾನೂನು ತೊಡಕುಗಳು ಇಲ್ಲದೇ ಇರುವ ರೀತಿಯಲ್ಲಿ ಕೆಲಸ ಮಾಡ್ತೀವಿ ಎಲ್ಲ ನಿರ್ಬಂಧಗಳನ್ನ ಗಮನದಲ್ಲಿಟ್ಟುಕೊಂಡು ಕೆಲಸ ಮಾಡ್ತೀವಿ ರಾಮಮಂದಿರ ನಿರ್ಮಾಣಕ್ಕೆ ಅಂದಾಜು 120 ಕೋಟಿ ವೆಚ್ಚ ಆಗಬಹುದು ಎಂದು ತಿಳಿಸಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ