ಹನುಮಾನ್‌ ಆದಾಯದಲ್ಲಿ ರಾಮನಿಗೂ ಪಾಲು

geetha

ಸೋಮವಾರ, 8 ಜನವರಿ 2024 (15:20 IST)
ಹೈದರಾಬಾದ್‌ : ಬಹು ಕೋಟಿ ಬಜೆಟ್‌ ನಲ್ಲಿ ನಿರ್ಮಾಣಗೊಂಡಿರುವ ಪ್ಯಾನ್‌ ಇಂಡಿಯಾ ಸಿನಿಮಾ “ಹನುಮಾನ್‌” ಚಿತ್ರದ ಮಾರಾಟವಾಗುವ ಪ್ರತಿ ಟಿಕೆಟ್‌ ಗೆ ಐದೂ ರೂ. ಗಳನ್ನು ಅಯೋಧ್ಯೆಯ ರಾಮಮಂದಿರಕ್ಕೆ ದೇಣಿಗೆ ನೀಡುವುದಾಗಿ ಖ್ಯಾತ ಚಿತ್ರನಟ ಮೆಗಾಸ್ಟಾರ್‌ ಚಿರಂಜೀವಿ ಘೋಷಿಸಿದ್ದಾರೆ. ಭಾನುವಾರ ಸಂಜೆ ನಡೆದ ಸಿನಿಮಾ ಪ್ರಿ ರಿಲೀಸ್‌ ಇವೆಂಟ್‌ ನಲ್ಲಿ ಭಾಗವಹಿಸಿದ್ದ ಚಿರಂಜೀವಿ ಈ ಘೋಷಣೆ ಮಾಡಿದ್ದಾರೆ. 
 
ನಮ್ಮ ಪುರಾಣಗಳ ಪ್ರಕಾರ ಹನುಮಂತ ರಾಮನಿಗೆ ಸಹಾಯ ಮಾಡಿದ್ದ. ಅದೇ ರೀತಿ ಇಲ್ಲಿ ಸಿನಿಮಾಗೆ ಸಹಾಯ ಮಾಡಲು ಶ್ರೀರಾಮಚಂದ್ರನೇ ನಟ ಚಿರಂಜೀವಿಯನ್ನು ಕಳಿಸಿದ್ದಾನೆ ಎಂದು ಸಿನಿಮಾ ತಂಡ ಹರ್ಷ ವ್ಯಕ್ತಪಡಿಸಿದೆ. ಹನುಮಂತನ ಭಕ್ತರಾದ ಚಿರಂಜೀವಿ ಕುಟುಂಬ ಹಲವೆಡೆ ಬೃಹತ್‌ ಹನುಮಂತನ ಮೂರ್ತಿ ಸ್ಥಾಪಿಸಿದೆ. ಅಷ್ಟೇ ಅಲ್ಲದೇ ಈ ಹಿಂದೆ ಹನುಮಾನ್‌ ಅನಿಮೇಷನ್‌ ಸಿನಿಮಾಗೆ ಸ್ವತಃ ಚಿರಂಜೀವಿ ಕಂಠದಾನ ಮಾಡಿದ್ದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ