ರಾಮ, ಸೀತೆ ಗೋಮಾಂಸ ಭಕ್ಷಕರು- ನಿಡುಮಾಮಿಡಿ ಶ್ರೀ

ಗುರುವಾರ, 25 ಜನವರಿ 2018 (10:13 IST)

ರಾಮ ಸೀತೆ ಗೋಮಾಂಸ ಸೇವನೆ ಮಾಡುತ್ತಿದ್ದರು ಎಂಬುದು ವಾಲ್ಮೀಕಿ ರಾಮಾಯಣದಲ್ಲಿ ಉಲ್ಲೇಖವಾಗಿದೆ ಎಂದು ನಿಡುಮಾಮಿಡಿ ವೀರಭದ್ರ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದ್ದಾರೆ.

ಬಳ್ಳಾರಿಯಲ್ಲಿ ಸೌಹಾರ್ದತೆಗಾಗಿ ಕರ್ನಾಟಕ ಸಮಿತಿಯಿಂದ ಆಯೋಜನೆ ಮಾಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಯಜ್ಞ ಯಾಗಾದಿಗಳ ಸಂದರ್ಭದಲ್ಲೂ ಗೋಮಾಂಸ ತಿನ್ನಲಾಗುತ್ತಿತ್ತು. ಇದನ್ನು ಆರ್.ಎಸ್.ಎಸ್. ಹಾಗೂ ಬಿಜೆಪಿ ಮರೆತು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿವೆ ಎಂದಿದ್ದಾರೆ.

ಆಗಿನ ಕಾಲದಲ್ಲಿ ಗೋ ಮಾಂಸ ತಿಂದವರು ಪೂಜ್ಯರು, ಆದರೆ, ಈಗ ತಿನ್ನುವವರು ಅಲ್ಲ ಎಂದರೆ ಹೇಗೆ. ಕಾಂಗ್ರೆಸ್ ಮುಕ್ತ ಭಾರತ ಎನ್ನುವ ಮೋದಿ ನಂತರದ ದಿನಗಳಲ್ಲಿ ಮುಸ್ಲಿಂ, ಕ್ರೈಸ್ತ, ಜೈನ ಹಾಗೂ ಲಿಂಗಾಯತ ಮುಕ್ತ ಭಾರತ ಎನ್ನುತ್ತಾರೆ. ಇದರರ್ಥ ಭಾರತದಲ್ಲಿ ಅವರು ಮಾತ್ರ ಉಳಿಯಬೇಕಾಗಿದೆ ಎಂದು ದೂರಿದ್ದಾರೆ.

ಹಿಂದೂಗಳು ಒಂದು ಎನ್ನುವವರೇ ಅಸ್ಪೃಶ್ಯರನ್ನು ಪ್ರಾಣಿಗಳಿಗಿಂತ ಹೀನವಾಗಿ ನೋಡಿದ್ದಾರೆ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ