ಚಾಮರಾಜಪೇಟೆಯಲ್ಲಿ ಗಣೇಶ ಕುರಿಸುವ ಸಲುವಾಗಿ ಹಿಂದೂ ಕಾರ್ಯಕರ್ತರ ರಂಪಾಟ

ಶನಿವಾರ, 3 ಸೆಪ್ಟಂಬರ್ 2022 (20:13 IST)
ಈದ್ಗಾ ಮೈದಾನ ಬಳಿ ಮತ್ತೆ ಗಣೇಶ ಕೂರಿಸೊ‌ ವಿಚಾರಕ್ಕೆ ಗಲಾಟೆ ನಡೆದಿದೆ.ಪೊಲೀಸರ ವಿರುದ್ಧವೇ ಹಿಂದೂ ಕಾರ್ಯಕರ್ತರು ತಿರುಗಿ ಬಿದ್ದಿದ್ದಾರೆ.ಚಾಮರಾಜಪೇಟೆ ಪೊಲೀಸ್ ಠಾಣೆ ಮುಂದೆಯೇ ದೊಡ್ಡ ಗಲಾಟೆ ನಡೆದಿದೆ.ಇನ್ನು ಪ್ರತಿಭಟನೆಯಲ್ಲಿ ತೊಡಗಿದ್ದ ಹಿಂದೂ ಕಾರ್ಯಕರ್ತರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ
 
ಈದ್ಗಾ ಮೈದಾನ ಬಳಿಯಲ್ಲಿ ಕಳೆದ ಮೂರು ವರ್ಷಗಳಿಂದ ಅಯ್ಯಪ್ಪನ ದೇವಾಲಯದ ಬಳಿ ಗಣೇಶನ ಪ್ರತಿಷ್ಟಾಪನೆ ಮಾಡ್ತಾ ಇದ್ರು .ಈ ಬಾರಿ ಮಹದೇಶ್ವರ ದೇವಾಲಯದ ಮುಂಭಾಗ ಅಂದ್ರೆ ಈದ್ಗಾ ಮೈದಾನಕ್ಕೆ ಹೊಂದಿಕೊಂಡಿರೋ ಅರಳಿಮರದ ಬಳಿ ಪ್ರತಿಷ್ಟಾಪನೆಗೆ ಮನವಿ ಮಾಡಿದ್ರು.ಬಳಿಕ ಪಾದರಾಯನಪುರ, ಜೆಜೆಆರ್ ನಗರ, ಸಿರ್ಸಿ ಸರ್ಕಲ್, ಗೋರಿಪಾಳ್ಯದ ಒಳಗೆ ಗಣೇಶನ ರ್ಯಾಲಿಗೂ ಮನವಿ ಮಾಡಿದ್ರು.ಈ ವೇಳೆ ರ್ಯಾಲಿ ಮತ್ತು ಪ್ರತಿಷ್ಟಾಪನೆಗೆ ಪೊಲೀಸರು ಒಪ್ಪಲಿಲ್ಲ.ಯಥಾಸ್ಥಿತಿ ಕಾಡುವಂತೆ ಸೂಚನೆ ನೀಡಿದ್ದಾರೆ.
 
ಅಯ್ಯಪ್ಪನ ದೇವಾಲಯದ ಬಳಿ ಗಣೇಶನ ಪ್ರತಿಷ್ಟಾಪನೆಗೆ ಪೊಲೀಸರು ಒಪ್ಪಿಗೆ ಸೂಚಿಸಿದ್ದಾರೆ. ಆದ್ರೆ ಮಹದೇಶ್ವರ ದೇವಾಲಯದ ಅರಳಿಮರದ ಬಳಿ ಪ್ರತಿಷ್ಠಾಪನೆಗೆ ಪೊಲೀಸರು ಒಪ್ಪದ ಕಾರಣಕ್ಕಾಗಿ ಗಲಾಟೆ ನಡೆದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ