ಚಂದ್ರಮಾನ ಯುಗಾದಿ : ಶಿವಲಿಂಗದ ಮೇಲೆ ಹೊಸ ವರ್ಷದ ಮೊದಲ ಸೂರ್ಯ ರಶ್ಮಿ

ಬುಧವಾರ, 25 ಮಾರ್ಚ್ 2020 (15:47 IST)
ಹಿಂದು ಪಂಚಾಂಗದ ಪ್ರಕಾರ ಹೊಸ  ವರ್ಷ ಆಚರಣೆ ಮಾಡುವುದು  ಚಂದ್ರಮಾನ ಯುಗಾದಿ ದಿನದಂದು.

ಕೊಪ್ಪಳ ಜಿಲ್ಲೆಯಲ್ಲಿ ಜನರು ತಮ್ಮ ತಮ್ಮ ಮನೆಯಲ್ಲಿ ಯುಗಾದಿಯನ್ನು ಸಂಭ್ರಮದಿಂದ ಆಚರಿಸಿದರು.  ಕೊಪ್ಪಳ ಜಿಲ್ಲೆಯ ಐತಿಹಾಸಿಕ ಸ್ಥಳ , ದೇವಾಲಯಗಳ ಚಕ್ರವರ್ತಿ ಎಂದು ಕರೆಸಿಕೊಂಡಿರುವ  ಕುಕನೂರು ತಾಲೂಕಿನ  ಇಟಗಿ ಗ್ರಾಮದ ಶ್ರಿ ಮಹೇಶ್ವರ ದೇವಾಲಯದಲ್ಲಿ ಯುಗಾದಿ ಪಾಡ್ಯದ ದಿನ ಸೂರ್ಯನಕಾಂತಿ ಶಿವಲಿಂಗದ ಮೇಲೆ ಬಿದ್ದಿತು. ಅಪರೂಪದ ಕ್ಷಣವಾಗಿರುವ ಸೂರ್ಯ ರಶ್ಮೀಯು ಶಿವಲಿಂಗದ ಮೇಲೆ ಬೀಳುವ ಈ ದೃಶ್ಯ  ವರ್ಷಕ್ಕೆ ಒಮ್ಮೆ ಇಂದು ಘಟಿಸಿತು.

ಕೊಪ್ಪಳ ಜಿಲ್ಲೆಯ ಕೋಟಿ ಲಿಂಗಗಳ ಪುರ. ಅರ್ಜುನ ಪಾಶು ಪತಾಸ್ತ್ರವನ್ನು ಶಿವನೊಡನೆ ಹೋರಾಡಿ ಪಡೆದ ಸ್ಥಳ ಇಂದ್ರಕಿಲಾ. ಇಂಥ ಐತಿಹ್ಯ ಹೊಂದಿರುವ ಜಿಲ್ಲೆಯಲ್ಲಿನ ಇಟಗಿ ದೇವಾಲಯದಲ್ಲಿ ಕಂಡು ಬಂದ ದೃಶ್ಯ ನೋಡಿ ಭಕ್ತರು ಧನ್ಯತಾಭಾವ ಮೆರೆದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ