ಕಂಡಕ್ಟರ್ ಸಮಯಪ್ರಜ್ಞೆಗೆ ತಪ್ಪಿದ ದುರಂತ
ಬಾಗಲಕೋಟೆ ಜಿಲ್ಲೆಯ ಹುನಗುಂದ ಪಟ್ಟಣ ಹೊರವಲಯದ ಸಾಯಿಬಾಬ ದೇವಾಲಯ ಹತ್ತಿರ ಶಾರ್ಟ್ ಸರ್ಕ್ಯೂಟ್‌ನಿಂದ ಲಾರಿ ಹೊತ್ತಿ ಉರಿದಿದೆ. ಬಾಗಲಕೋಟೆ ಸಿಮೆಂಟ್ ಫ್ಯಾಕ್ಟರಿಯಿಂದ ತೋರಣಗಲ್ಲಿಗೆ ಜಲ್ಲಿ ತುಂಬಿಕೊಂಡು ಹೋಗುತ್ತಿದ್ದ ಲಾರಿಗೆ ಎಂಜಿನ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಚಾಲಕ ಕೂಡಲೇ ರಸ್ತೆ ಬದಿಗೆ ಲಾರಿ ನಿಲ್ಲಿಸಿ ಕೆಳಗೆ ಜಿಗಿದಿದ್ದಾನೆ. ಇದೇ ಮಾರ್ಗದಲ್ಲಿ ತೆರಳುತ್ತಿದ್ದ ಶಹಾಪುರ - ಇಳಕಲ್ ಬಸ್‌ನಲ್ಲಿದ್ದ ನಿರ್ವಾಹಕಿ ಶರಣಮ್ಮ ಗೌಡರ ಈ ದೃಶ್ಯ ಕಂಡು ತಕ್ಷಣ ಅಗ್ನಿಶಾಮಕದಳಕ್ಕೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಲಾರಿ ಕ್ಯಾಬಿನ್ ಸಂಪೂರ್ಣ ಸುಟ್ಟಿದ್ದು , ಡಿಸೇಲ್ ಟ್ಯಾಂಕ್‌ಗೆ ಬೆಂಕಿ ತಗಲುತ್ತಿದ್ದ ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸಿದರು. ಇದರಿಂದ ದೊಡ್ಡ ಅನಾಹುತ ತಪ್ಪಿಹೋಗಿದೆ. ಬಸ್ ನಿರ್ವಾಹಕಿ ಶರಣಮ್ಮನ ಸಮಯಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ. ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.