ಊಟಕ್ಕೆ ಪರದಾಡುತ್ತಿರುವ ನಿರಾಶ್ರಿತರು!

ಮಂಗಳವಾರ, 21 ಆಗಸ್ಟ್ 2018 (16:31 IST)
ಕೇರಳದಲ್ಲಿ ಸುರಿದ ಭಾರೀ ಮಳೆಗೆ ಗಡಿ ಭಾಗದ ಜನರು ತತ್ತರಿಸಿ ಹೋಗಿದ್ದು, ತುತ್ತು ಅನ್ನಕ್ಕಾಗಿ ಗಂಜಿ ಕೇಂದ್ರಗಳಲ್ಲಿ ಪರಿತಪಿಸುವ ಸ್ಥಿತಿ ಎದುರಾಗಿದೆ.

ಕಳೆದ 15 ದಿನಗಳಿಂದ ಕೇರಳ ಮತ್ತು ವೈನಾಡಿನಲ್ಲಿ ಸುರಿದ ಭಾರಿ ಮಳೆಗೆ ಕರ್ನಾಟಕದ ಗಡಿ ಭಾಗವಾದ ಡಿಬಿ ಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡೇ ಗದ್ದೆ, ವಡಕನ ಮಾಳ, ಬೈರನ್ ಕುಪ್ಪೆ, ಆನೆಮಾಳ, ಮುಚ್ಚೂರು ಗ್ರಾಮಗಳು ನೀರಿನಿಂದ ಜಲಾವೃತ್ತಗೊಂಡಿವೆ. ಇನ್ನೂರಕ್ಕೂ ಹೆಚ್ಚು ಮಂದಿ ಬೈರನಕುಪ್ಪೆ ಸರ್ಕಾರಿ ಶಾಲೆಯಲ್ಲಿ ತೆರೆದಿರುವ ಗಂಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ.
ಈ ಗಂಜಿ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಜನರು ಕೇವಲ ಒಂದು ಹೊತ್ತಿನ ಊಟವನ್ನಷ್ಟೇ ಮಾಡುತ್ತಿದ್ದು, ಬಟ್ಟೆ ಮತ್ತು ಕುಡಿಯಲು ನೀರಿಲ್ಲದೆ ಪರದಾಡುತ್ತಿದ್ದಾರೆ. ಹೀಗಾಗಿ ಈ ಗಂಜಿ ಕೇಂದ್ರಕ್ಕೆ ಕೂಡಲೇ ಸರಿಯಾದ ಆಹಾರ, ನಿರಾಶ್ರಿತರಿಗೆ ಬಟ್ಟೆ ಮತ್ತು ಕುಡಿಯಲು ನೀರು ಪೂರೈಸುವಂತೆ ಜನರು ವಿನಂತಿಸಿದ್ದಾರೆ. 

ಇನ್ನೂ ವಿದ್ಯುತ್ ಸಂಪರ್ಕ ಕಡಿತವಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ತಿರುಪತಿಯವರೇ ಕಂಬ ಏರಿ ವಿದ್ಯುತ್ ಸರಿಪಡಿಸಿದ್ದು, ರೆವಿನ್ಯೂ ಇನ್ಸ್ಪೆಕ್ಟರ್ ಆದ ಗೌಸ್ ಅವರು ನಿರಾಶ್ರಿತರ ಮನೆಗಳಿಗೆ ತೆರಳಿ ಅವರ ಬೇಡಿಕೆಗಳನ್ನ ಈಡೇರಿಸಲು ಶ್ರಮಿಸುತ್ತಿದ್ದಾರೆ ಎನ್ನಲಾಗಿದೆ. ಆದರೂ ನಿರಾಶ್ರಿತರಿಗೆ ಹೆಚ್ಚಿನ ಅನುಕೂಲ ಕಲ್ಪಿಸಲು ಆಡಳಿತ ವಿಫಲವಾಗಿದೆ ಎಂಬ ಆರೋಪ ಕೇಳಿಬಂದಿದೆ.ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ