ರೇಖಾ ಕದಿರೇಶ್ ಹತ್ಯೆ: ಇಬ್ಬರ ಮೇಲೆ ಅನುಮಾನ

ಶುಕ್ರವಾರ, 25 ಜೂನ್ 2021 (11:55 IST)
ಬೆಂಗಳೂರು: ಬಿಜೆಪಿ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಹತ್ಯೆ ಪ್ರಕರಣ ಬೇಧಿಸಲು ಪೊಲೀಸರು ಬಲೆ ಬೀಸಿದ್ದು, ಇಬ್ಬರ ಮೇಲೆ ಅನುಮಾನ ತೀವ್ರವಾಗಿದೆ.


ಹಾಡಹಗಲೇ ರೇಖಾ ಬರ್ಬರವಾಗಿ ಹತ್ಯೆ ಮಾಡಿದವರ ಬಗ್ಗೆ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಮೂಲಗಳ ಪ್ರಕಾರ, ರೇಖಾ ಹತ್ಯೆಯ ಹಿಂದೆ ಸೋದರಳಿಯನ ಕೈವಾಡವೂ ಇತ್ತು ಎನ್ನಲಾಗಿದೆ.

ಈತನಲ್ಲದೆ, ರೇಖಾ ಜೊತೆಗೇ ಇರುತ್ತಿದ್ದ ಪೀಟರ್ ಎಂಬಾತನ ಮೇಲೂ ಪೊಲೀಸರ ಅನುಮಾನವಿದೆ. ಕೌಟುಂಬಿಕ ಕಲಹ ಅಥವಾ ಟೆಂಡರ್ ಗಲಾಟೆಯೇ ಕೊಲೆಗೆ ಕಾರಣವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ