100 ತಾಲೂಕುಗಳಲ್ಲಿ ಕಂದಾಯ ದಾಖಲೆಗಳಿಗೆ ಯುಎನ್ಪಿನ್ ಅಳವಡಿಸಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಅವರು ತಿಳಿಸಿದ್ದಾರೆ. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ತಿಪ್ಪೇಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಸಚಿವರು, 100 ತಾಲೂಕುಗಳಲ್ಲಿ ಕಂದಾಯ ದಾಖಲೆಗಳಿಗೆ ಯುಎನ್ಪಿನ್ ಅಳವಡಿಸಲಾಗಿದೆ.
ಡ್ರೋಣ್ ಬಳಸಿ ರೀ ಸರ್ವೇ ಕಾರ್ಯ ನಡೆಸಿ, ಗಡಿ ಗುರುತಿಸಿ ದಾಖಲೆ ಮಾಡಲಾಗುತ್ತಿದೆ. ಈಗಾಗಲೇ 5 ಜಿಲ್ಲೆಯಲ್ಲಿ ಮಾಡಲಾಗುತ್ತಿದೆ. ರಾಮನಗರ ಜಿಲ್ಲೆಯ ಡ್ರೋಣ್ ಸರ್ವೇ ಮುಗಿದಿದೆ. ತುಮಕೂರಿನಲ್ಲಿ ಸರ್ವೇ ಆಗುತ್ತಿದೆ. ಬೆಂಗಳೂರಿನಲ್ಲಿಯೂ ಪ್ರಗತಿಯಲ್ಲಿದೆ ಎಂದರು. ಕಂದಾಯ ದಾಖಲೆಗಳ ಡಿಜಿಟಲೀಕರಣದಿಂದ ನಮ್ಮದಾಖಲೆ ಡಿಜಿಟಲ್ ಆಗಲಿದೆ. ಎಲ್ಲರ ಆಸ್ತಿ ಗಣಕೀಕೃತವಾಗಲಿದೆ. ಇದಕ್ಕಾಗಿ ಮತ್ತಷ್ಟು ಅನುದಾನಕ್ಕಾಗಿ ಕೇಂದ್ರಕ್ಕೆ ಮನವಿ ಮಾಡಲಾಗುತ್ತದೆ. ಮುಂದಿನ ಮೂರು ವರ್ಷದಲ್ಲಿ ಡ್ರೋಣ್ ರೀ ಸರ್ವೇ ಮತ್ತು ಡಿಜಿಟಲೀಕರಣ ಮುಗಿಸಲಾಗುತ್ತದೆ ಎಂದು ಹೇಳಿದರು.