ಬೆಂಗಳೂರಿನ ರಸ್ತೆಗಳು ಹೆಚ್ಚು ಅಪಾಯಕಾರಿ: ಏಕೆ ಗೊತ್ತಾ...?

ಗುರುವಾರ, 6 ಜನವರಿ 2022 (20:53 IST)
ಬೆಂಗಳೂರು ನಗರವೊಂದರಲ್ಲೇ 1300ಕ್ಕೂ ಹೆಚ್ಚು ರಸ್ತೆಗುಂಡಿಗಳಿವೆ ಎಂದು ವರದಿಯೊಂದು ತಿಳಿಸಿದೆ. ಸಿಲಿಕಾನ್ ಸಿಟಿಯಲ್ಲಿನ ಅಧಿಕಾರಿಗಳ ನಿರ್ಲಕ್ಷ್ಯದಿಂದ ದಿನಕ್ಕೆ ನೂರಾರು ಸಾವು ನೋವುಗಳು ಸಂಭವಿಸುತ್ತೆ. 2020ರ ಅಂಕಿ ಅಂಶದಲ್ಲಿ ರಾಜ್ಯದಲ್ಲಿ 34,178 ರಸ್ತೆ ಅಪಘಾತಗಳಾಗಿದ್ದು, ಇದು ದೇಶದಲ್ಲಿ ಸಂಭವಿಸಿದ ಅಪಘಾತಗಳ ಶೇ.9.33ರಷ್ಟಾಗಿದೆ. 2021ರಲ್ಲಿ ಬೆಂಗಳೂರು ಒಂದರಲ್ಲೇ 28036 ಅಪಘಾತಗಳಗಿದ್ದು, 7,523 ಮಂದಿ ಮೃತಪಟ್ಟಿದ್ದಾರೆ. 33,864 ಮಂದಿ ಗಾಯಗೊಂಡಿದ್ದಾರೆ ಎಂದು ವರದಿ ಹೇಳುತ್ತೆ.
ಅಷ್ಟೇ ಅಲ್ಲ ಈ ಎಲ್ಲಾ ಕಾರಣಗಳಿಂದಲೂ ಬೆಂಗಳೂರಿನ ರಸ್ತೆಗಳು ಅಪಾಯಕಾರಿ ಎನ್ನಬಹುದು.
 
ಕಲ್ಲು-ಬ್ಯಾರಿಕೇಡ್ ಗಳು:- ನಿನ್ನೆ ರಾತ್ರಿ ಸರಿಯಾಗಿದ್ದ ರಸ್ತೆ ಇಂದು ಅದು ಹೇಗೋ ಹಾಳಾಗಿ ರಸ್ತೆ ಮಧ್ಯದಲ್ಲಿ ಒಂದು ಪೊಲೀಸ್ ಬ್ಯಾರಿಕೇಡ್ ಅಥವಾ ಕಲ್ಲುಗಳಿಂದ ಕೂಡಿರುತ್ತವೆ. ಇದು ಗೊತ್ತಿಲ್ಲದೆ ವೇಗವಾಗಿ ಬಂದ ಚಾಲಕ ನೆಲಕ್ಕುರಳದೆ ಇರಲಾರನು.
ಕೋವಿಡ್‌ ಸೋಂಕಿನ ವೇಳೆ ಕಂಟೇನ್ಮೆಂಟ್‌ ಜೋನ್‌ ಗಳಿಗಾಗಿ ಬಿಬಿಎಂಪಿ ಬರೋಬ್ಬರಿ 20 ಕೋಟಿ ರೂ. ವೆಚ್ಚ ಮಾಡಿ ಬ್ಯಾರಿಕೇಡ್‌ ಗಳನ್ನು ಖರೀದಿಸಿತ್ತು ಎಂದು ದಿ ಹಿಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.
 
ಹಳೆ ಕಾರು, ಬೈಕ್: - ಇನ್ನು ಕೆಲವರಿಗೆ ರಸ್ತೆಗಳು ಗುಜರಿ ಅಂಗಡಿಯಾಗಿಯೇ ಉಳಿದಿರುತ್ತೆ. ಕೆಲವು ಕಡೆ ಪೊಲೀಸರೇ ಸೀಜ್ ಮಾಡಿ ವರ್ಷಾನುಗಟ್ಟಲೆಯಿಂದ ಸಂಗ್ರಹಿಸಿಟ್ಟಿದ್ದು. ಮತ್ತೆ ಕೆಲವೆಡೆ ರಿಪೇರಿಗೆಂದು ನಿಲ್ಲಿಸಿಟ್ಟ ವಾಹನಗಳು.ಇನ್ನು ರಸ್ತೆ ಅಕ್ಕ ಪಕ್ಕ ನಿಲ್ಲಿಸಿದ, ಪೊಲೀಸರು ಸೀಜ್‌ ಮಾಡಿದ ಬರೋಬ್ಬರಿ 1.98 ಲಕ್ಷ ಗುಜರಿಗಾಡಿಗಳನ್ನು ಡಂಪ್‌ ಮಾಡಲು ರಾಜ್ಯ ಸರ್ಕಾರ 2021ರಲ್ಲಿ ಕೆಲಸ ಆರಂಭಿಸಿದೆ.
 
ಪ್ರಾಣಿಗಳು: - ಇವುಗಳಿಗೆ ಅನ್ಯಾಯವಾಗುತ್ತಿರುವುದು ಮನುಷ್ಯರಿಂದ ಅನ್ನೋದಂತು ಹೌದು. ಅವುಗಳಿಗೆ ಆಹಾರ, ನೀರು, ವಸತಿ ಇಲ್ಲದೆ ರಸ್ತೆ ರಸ್ತೆಗಳಲ್ಲಿ ಮಲಗುವ ಪ್ರಾಣಿಗಳು. ಇವುಗಳನ್ನು ಸೇವ್ ಮಾಡೋಕೆ ಹೋದ ಜನರು ಜಾರಿ ಬಿದ್ದಿರುತ್ತಾರೆ.
 
ಕನ್ನಡಿ ಇಲ್ಲದ ವಾಹನ:-
ಈ ಗಾಡಿ, ಕಾರು ಚಾಲಕರಿಗೆ ಎಷ್ಟು ಧೈರ್ಯ ಅಂದ್ರೆ ಹಿಂದೆ ಬರುತ್ತಿರುವವರನ್ನು ನೋಡುವುದೇ ಬೇಡ ಅಂತ ಫುಲ್ ಸ್ಪೀಡ್ ನಲ್ಲಿ ಹೋಗ್ತಾರೆ. ಇವರ ಡ್ರೈವಿಂಗ್ ನಿಂದ ಪ್ರಾಣಬಿಟ್ಟವರು ಎಷ್ಟೋ.?
 
ಚಾಲೆಂಜ್: - ನಾನಾ ಅಥವಾ ನೀನಾ? ಈ ರೀತಿ ರಸ್ತೆಯಲ್ಲಿ ಫೈಟ್ ಮಾಡಿಕೊಂಡು ರೇಸ್ ಮಾಡೋರಿಂದಲೂ ಜನ ಹುಷಾರಾಗಿರಬೇಕು.
 
ಹೈ ಬೀಮ್;-ಇನ್ನು ಕೆಲವರಿಗೆ ತಮ್ಮ ವಾಹನದಲ್ಲಿನ ಹೆಡ್ ಲೈಟ್ ಯಾಕಿವೆ? ಅದನ್ನು ಹೇಗೆ ಬಳಸಬೇಕು ಅನ್ನೋದರ ಬಗ್ಗೆ ಅರಿವು ಕೂಡ ಇರೋದಿಲ್ಲ.. ಸಿಟಿ ಮಧ್ಯದಲ್ಲಿ ಹೈ ಬೀಮ್ ಹಾಕೊಂಡು ಜಬರ್ಧಸ್ತ್ ಡ್ರೈ ಮಾಡಿಕೊಂಡು ಹೋಗ್ತಾರೆ. ಇದರಿಂದ ಎಷ್ಟೋ ಜನ ರಸ್ತೆ ಕಾಣದೆ ಮುಗ್ಗರಿಸಿರುತ್ತಾರೆ.
 
ರಾಂಗ್ ರೂಟ್: - ಇನ್ನು ಕೆಲವರಿಗೆ ಸರಿಯಾದ ರೂಟ್ ನಲ್ಲಿ ಹೋಗುವ ಅಭ್ಯಾಸವೇ ಇಲ್ಲ. ಸಿಕ್ಕಸಿಕ್ಕಲ್ಲೆಲ್ಲಾ ನುಗ್ಗಿಸಿಬಿಡ್ತಾರೆ. ಈ ರಾಂಗ್ ರೂಟ್ ನಲ್ಲಿ ಬರುವವನನ್ನು ತಪ್ಪಿಸಲು ಹೋಗೆ ಬೇರೆ ಗಾಡಿಗೆ ಗುದ್ದುಕೊಳ್ತಾರೆ ಬೇರೆಯವರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ