ರೋಹಿತ್ ಚಕ್ರತೀರ್ಥ ವಿರುದ್ಧ ಮುಂದುವರೆದ ಸಾಹಿತಿ, ಚಿಂತಕರ ಸಮರ

ಸೋಮವಾರ, 30 ಮೇ 2022 (20:23 IST)
ಪಠ್ಯ ಪುಸ್ತಕ ವಿವಾದ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈ ವಿವಾದ ಮುಗಿಯುವ ಲಕ್ಷಣ ಕಾಣ್ತಿಲ್ಲ. ನಗರದಾದ್ಯಂತ ಪಠ್ಯಪುಸ್ತಕ ವಿಷಯವಾಗಿ  ವಕೀಲರು, ಕನ್ನಡಪರ ಸಂಘಟನೆಯ ನಾಯಕರು ಸೇರದಂತೆ ಹಲವು ಚಿಂತಕರು ಆಕ್ರೋಶ ಹೊರಹಾಕ್ತಿದ್ದಾರೆ.ಇಂದು ಬೀದಿಗಿಳಿದ್ದು ಪಠ್ಯ ಪುಸ್ತಕ ಪರಿಷ್ಕರಣೆ ಮಾಡಬೇಕೆಂದು ಒತ್ತಾಯಿಸಿದ್ರು. ಅಷ್ಟೇ ಅಲ್ಲದೆ ಬರಗೂರು ರಾಮಚಂದ್ರಪ್ಪನವರ ಸಮಿತಿಯ ಪಠ್ಯವನ್ನೇ ಅಳವಡಿಸಬೇಕೆಂದು ಆಗ್ರಹಿಸಿದ್ರು.ರಾಜಧಾನಿಯಲ್ಲಿ ಪಠ್ಯ ಪುಸ್ತಕ ವಿಷಯವಾಗಿ ಒಂದರ ನಂತರ ಮತ್ತೊಂದರಂತೆ ಧರಣಿ ನಡೆಯುತ್ತಿತ್ತು. ಒಂದು ಕಡೆ ಮಲೇಶ್ವರಂನ್ನ  ಸಂಪಿಗೆ ರಸ್ತೆಯ ಕುವೆಂಪು ಪ್ರತಿಮೆ ಮುಂಭಾಗ  ಕರವೇ ಬಣ  ರೋಹಿತ್ ಚಕ್ರತೀರ್ಥನ್ನ ಪ್ರತಿಮೆಗೆ ಚಪ್ಪಲಿಯಲ್ಲಿ ಹೊಡೆಯುವ ಮೂಲಕ ಧರಣಿ ನಡೆಸಿದ್ರು. ಮತ್ತೊಂದು ಕಡೆ ಸಿಟಿ ಸಿವಿಲ್ ಕೋರ್ಟ್ ಮುಂಭಾಗ ವಕೀಲರ ಸಂಘದಿಂದ ಧರಣಿ ನಡೆಸಿದ್ರು. ಇದರ ಜೊತೆಗೆ ವಾಟಾಳ್ ನಾಗರಾಜ್ ಕೂಡ ವಿನೂತನವಾಗಿ ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ಧರಣಿ ನಡೆಸಿದ್ರು. ವಾಟಾಳ್ ನಾಗರಾಜ್ ಬೆಳ್ಳಿ ರಥದಲ್ಲಿ ಕುವೆಂಪುರವರ ಭಾವ ಚಿತ್ರವನ್ನ ಹಾಕಿಕೊಂಡು ನಾಡಗೀತೆ ಮತ್ತು ರಾಷ್ಟ್ರಗೀತೆಯನ್ನ ಹಾಕಿಕೊಂಡು ಮೆಜಸ್ಟಿಕ್ ವರೆಗೂ ವಿನೂತನವಾಗಿ ಧರಣಿ ನಡೆಸಿದ್ರು. ಇಷ್ಟೆಲ್ಲ ಆಕ್ರೋಶ ನಗರದಲ್ಲಿ ನಡೆಯುತ್ತಿದ್ರೆ ಮತ್ತೊಂದು ಕಡೆ ಕುಪ್ಪಳ್ಳಿಯ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಸ್ಥಾನಕ್ಕೆ ಹಂಪಾ ನಾಗರಾಜಯ್ಯ ರಾಜೀನಾಮೆ ಸಲ್ಲಿಸಿದಾರೆ.

ರೋಹಿತ್ ಚಕ್ರತೀರ್ಥ ವಿರುದ್ಧ  ಸಾಹಿತಿ, ಚಿಂತಕರ ಸಮರ ಮುಂದುವರೆದಿದೆ. ರಾಷ್ಟ್ರಕವಿ ಕುವೆಂಪುಗೆ  ಅವಹೇಳನ ಮಾಡಿರುವ ರೋಹಿತ್ ಚಕ್ರತೀರ್ಥ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಆತನನ್ನ ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ನಗರದಲ್ಲಿ ಧರಣಿ ಮುಂದುವರೆದಿತ್ತು.ಇತ್ತ ರಾಷ್ಟ್ರಕವಿ ಕುವೆಂಪುಗೆ ಅಪಮಾನವಾಗ್ತಿರುವುದನ್ನ  ನೋಡುತ್ತಾ ಸುಮ್ಮನೆ ಕೂರಲಾಗದು ಎಂದ ಹಂಪ ನಾಗರಾಜ್ ಬೇಸರಗೊಂಡು ರಾಜಿನಾಮೆ ನೀಡಿದ್ರು. ಸರ್ಕಾರ  ಇಂತಹವರನ್ನ ಪುರಸ್ಕರಿಸುವುದನ್ನು ಸಹಿಸಲಾಗದು ಕೂಡಲೇ ಮುಖ್ಯಮಂತ್ರಿಗಳು ತಮ್ಮ ರಾಜೀನಾಮೆ ಅಂಗೀಕರಿಸಬೇಕು ಎಂದು ಸಿಎಂಗೆ ಹಂಪ ನಾಗರಾಜ್ ಪತ್ರ ರವಾನಿಸಿದ್ದಾರೆ. ಇನ್ನು ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ಹಳೆಯ ಪಠ್ಯವನ್ನೇ ಬಳಸಬೇಕು . ಕುವೆಂಪುಗೆ ಆಗಿರುವ ಅವಮಾನ ಸಹಿಸಲು ಆಗುವುದಿಲ್ಲ. ರಾಷ್ಟ್ರಕವಿಗೆ ಅವಮಾನವಾಗುವುದು ನಮ್ಮಗೆ ಅವಮಾನವಾದಂತೆ ಎಂದು ಮತ್ತೆ ಪಠ್ಯವನ್ನ ಪರಿಷ್ಕರಿಸಿ ಇಲ್ಲವಾದಲ್ಲಿ ನಮ್ಮ ಮುಂದಿನ ಹೋರಾಟ ಉಗ್ರ ರೂಪದಲ್ಲಿರುತ್ತೆ ಎಂದು ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.ಇನ್ನು ಇತ್ತ ಸಿಟಿ ಸಿವಿಲ್ ಕೋರ್ಟ್ ನಲ್ಲಿ ವಕೀಲರ ಸಂಘದಿಂದ ನಡೆದ ಧರಣಿ ತೀವ್ರ ಸ್ವರೂಪ ಪಡೆದಿತ್ತು. ಕಾನೂನಿನ ಮೂಲಕ ಹೋರಾಟ ಮಾಡುವುದಕ್ಕೆ ವಕೀಲರು ಮುಂದಾಗಿದ್ರು. ರಾಷ್ಟ್ರಕವಿ ಕುವೆಂಪು ರವರನ್ನ ಅವಮಾನಿಸಿದ್ದಾರೆ.ನಾಡಗೀತೆ ಮತ್ತು ರಾಷ್ಟ್ರಗೀತೆಗೂ ಅವಮಾನ ಮಾಡಿದ್ದಾರೆ.ವಕೀಲರಾಗಿ ನಮ್ಮಗೆ ಸಾಮಾಜಿಕ ಜವಾಬ್ದಾರಿ ಇದೆ.ಕರ್ನಾಟಕದ ಮೇಲೆ ಸಾಂಸ್ಕೃತಿಕ ದಬ್ಬಾಳಿಕೆಯಾಗಿದೆ . ಕರ್ನಾಟಕದ ಮೇಲೆ ಏನು ಕೊಡುಗೆ ಇಲ್ಲದವರನ್ನ ಪಠ್ಯದಲ್ಲಿ ಸೇರಿಸಿದ್ದಾರೆ.ಜಾತಿ ರಾಜಕೀಯ ಮಾಡ್ತಿದ್ದಾರೆ.ಸಾರಾ ಅಬುಕಾರ್ , ಸೇರಿದಂತೆ ಅನೇಕರ ಪಠ್ಯ ತೆಗೆದಿದ್ದಾರೆ.ಇದು ಗಂಭೀರವಾದ ವಿಷಯ ಈ ವಿಷಯವನ್ನ ನಾವು ಇಲ್ಲಿಗೆ ಬಿಡಲ್ಲ.ಪಠ್ಯಪುಸ್ತಕ ಸಮಿತಿಯನ್ನ ರದ್ದು ಮಾಡಬೇಕು.ರೋಹಿತ್ ಚಕ್ರತೀರ್ಥನ್ನ ಕೂಡಲೇ ಬಂಧಿಸಬೇಕು.ಹೀಗಾಗಿ ನಾವು ಕಾನೂನಾತ್ಮಕವಾಗಿ ಹೋರಾಟ ಮಾಡಲು ಮುಂದಾಗಿದೇವೆ.ಬಿಸಿ ನಾಗೇಶ್ ನ್ನ ವಜಾಮಾಡಬೇಕು.ಬರಗೂರು ರಾಮಚಂದ್ರ ಸಮಿತಿಯ ಪುಸ್ತಕ ವನ್ನೇ ಮುಂದುವರೆಸಬೇಕೆಂದು ವಕೀಲರ ಸಂಘದಿಂದ ಆಗ್ರಹಿಸಿದ್ರು

ಪಠ್ಯಪುಸ್ತಕ ವಿವಾದ ಮುಗಿಯುವ ಲಕ್ಷಣ ಕಾಣ್ತಿಲ್ಲ. ಈಗಾಗಲ್ಲೇ ಶಾಲೆ ಶುರುವಾಗಿದೆ ಅರ್ಧಪಠ್ಯಪುಸ್ತಕ ಮುದ್ರಣವಾಗಿದೆ,ಈಗ ಪಠ್ಯಪುಸ್ತಕ ವಿಷಯವಾಗಿ ದಿನಕ್ಕೊಂದು ಕಂಟ್ರಾವರ್ಸಿ ನಡೆಯುತ್ತಿದೆ. ಈ ವಿವಾದಕ್ಕೆ ತೆರೆ ಎಳೆಯುವ ಕೆಲಸ ಶಿಕ್ಷಣ ಸಚಿವರು ಮಾಡಿದ್ರು ಅದು ವರ್ಕೌಟ್ ಆಗಿಲ್ಲ.ಇನ್ನು ಪಠ್ಯಪುಸ್ತಕ ಪರಿಷ್ಕರಣೆ ಮಾಡುವವರೆಗೂ ಈ ಹೋರಾಟ ಮುಗಿಯುವ ಲಕ್ಷಣ ಕಾಣ್ತಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ