ಸಿದ್ದರಾಮಯ್ಯ ವಿರುದ್ಧ ಸದಾನಂದಗೌಡ ವಾಗ್ದಾಳಿ
ಬೆಂಗಳೂರು-ನಾಳೆ ಶಾಲೆಗಳಿಗೆ ರಜೆ ಕೊಡದ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸದಾನಂದಗೌಡ ವಾಗ್ದಾಳಿ ನಡೆಸಿದ್ದಾರೆ.ಸಿದ್ದರಾಮಯ್ಯ ನಾಳೆ ಸ್ವಯಂಪ್ರೇರಿತರಾಗಿ ರಜೆ ಕೊಡಬೇಕಿತ್ತು.ರಜೆಗೆ ಪತ್ರದ ಅವಶ್ಯಕತೆ ಇಲ್ಲ.ಕೇಂದ್ರವೇ ಅರ್ಧ ದಿನ ರಜೆ ಕೊಟ್ಟಿದೆ.ನಮ್ಮ ರಾಜ್ಯ ಹನುಮನ ನಾಡು.ಯಾವುದೇ ಪೂರ್ವಾಪರ ಯೋಚಿಸದೇ, ಸ್ವಪಕ್ಷೀಯರ ಮಾತು ಕೇಳದೇ ಸಿದ್ದರಾಮಯ್ಯ ರಜೆ ಘೋಷಸಲಿ.ಜನವರಿ 22 ರಂದು ಸಿದ್ದರಾಮಯ್ಯ ರಜೆ ಘೋಷಿಸಿ, ಪುಣ್ಯ ಕಟ್ಟಿಕೊಳ್ಳಲಿ.ರಾಮಮಂದಿರ ನಿರ್ಮಾಣದಿಂದ ಸಿದ್ದರಾಮಯ್ಯ ವಿಚಲಿತರಾಗಿದ್ದಾರೆ.ಹರಿಪ್ರಸಾದ್ ಅವರ ಗೋಧ್ರಾ ಹೇಳಿಕೆಯಿಂದ ಸಿದ್ದರಾಮಯ್ಯ ಭಯ ಬಿದ್ದಿರಬೇಕು.ಅದಕ್ಕೇ ಅವರು ರಜೆ ಕೊಡ್ತಿಲ್ಲವೇನೋ? ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಸದಾನಂದಗೌಡ ವಾಗ್ದಾಳಿ ನಡೆಸಿದ್ದಾರೆ.