ಸಾಯಿ ಪ್ರಸಾದ್ ರಾಮೇಶ್ವರಂ ಕೆಫೆ ಸ್ಫೋಟದ ಆರೋಪಿಯಲ್ಲ, ಸ್ಪಷ್ಟನೆ ಕೊಟ್ಟ ಎನ್‌ಐಎ
ಇದರ ಬೆನ್ನಲ್ಲಿಯೇ ರಾಷ್ಟ್ರೀಯ ತನಿಖಾ ಸಂಸ್ಥೆ, ಪ್ರಕಟಣೆ ನೀಡಿ ಸ್ಪಷ್ಟೀಕರಣ ನೀಡಿದ್ದು, ಸಾಕ್ಷಿಯಾಗಿ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದೆ. ಬಿಜೆಪಿ ಕಾರ್ಯಕರ್ತ ಸಾಯಿ ಪ್ರಸಾದ್ ಹಾಗೂ ಮೊಬೈಲ್ ಅಂಗಡಿ ಮಾಲೀಕನನನ್ನು ಈಗಾಗಲೇ ಎನ್‌ಐಎ ವಿಚಾರಣೆ ಮಾಡಿದೆ. ಇಬ್ಬರನ್ನು ಪ್ರಕರಣ ಸಾಕ್ಷಿಗಳನ್ನಾಗಿ ಮಾಡಲು ಎನ್ ಐ ಎನಿಂದ ವಿಚಾರಣೆ ನಡೆಸಲಾಗಿದೆ ಎಂದು ಸ್ಪಷ್ಟಿಕರಣ ನೀಡಿದೆ.