ಸದ್ದಿಲ್ಲದೇ ಸಾಗಿದೆ ಶ್ರೀಗಂಧದ ಕಟ್ಟಿಗೆ ಅಕ್ರಮ ಸಾಗಾಟ!

ಸೋಮವಾರ, 27 ಆಗಸ್ಟ್ 2018 (18:25 IST)
ಅನಧಿಕೃತವಾಗಿ ಶ್ರೀಗಂಧದ ಕಟ್ಟಿಗೆ ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಆ ಮೂಲಕ ಅಕ್ರಮವಾಗಿ ಶ್ರೀಗಂಧದ ಕಟ್ಟಿಗೆ ಈಗಲೂ ಸದ್ದಿಲ್ಲದೇ ನಡೆಯುತ್ತಿದೆ ಎಂಬ ಅನುಮಾನಕ್ಕೆ ಜನರಲ್ಲಿ ಕಾರಣವಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ಹುಲೇಕಲ್ ವಲಯದ ಹೆಗಡೆಕಟ್ಟಾ ಶಾಖೆಯಲ್ಲಿ ರಾತ್ರಿ ಅರಣ್ಯ ಸಿಬ್ಬಂದಿ ಗಸ್ತು ತಿರುಗುವ ವೇಳೆ ಹೆಗಡೆಕಟ್ಟಾ ಮಸೀದಿ ಪಕ್ಕದ ಲೋಕೋಪಯೋಗಿ ರಸ್ತೆಯಲ್ಲಿ  ಅಕ್ರಮವಾಗಿ ಸಾಗಿಸುತ್ತಿದ್ದ ಶ್ರೀಗಂಧದ ಕಟ್ಟಿಗೆಗಳು ಪತ್ತೆಯಾಗಿವೆ.

ಬೆಳಗಿನ ಜಾವ ಸುಮಾರು 3 ಗಂಟೆಯ ವೇಳೆ ಬೈಕ್ ನಂ.KA31 W 9723ರಲ್ಲಿ ಅನಧಿಕೃತವಾಗಿ 73 ಕೆ.ಜಿ.ಶ್ರೀಗಂಧದ ಕಟ್ಟಿಗೆ ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು ಒಬ್ಬನನ್ನು ವಶಕ್ಕೆ ಪಡೆಯಲಾಗಿದೆ. ಬೆಳೆನಳ್ಳಿ ಗ್ರಾಮದ ರಾಮಚಂದ್ರಪ್ಪ ಈರಪ್ಪ ನಾಯ್ಕ ಬಂಧಿತ ಆರೋಪಿ ಎಂದು ತಿಳಿದು ಬಂದಿದೆ. ಈ ಕುರಿತು ಹುಲೇಕಲ್ ಠಾಣೆಯ ವ್ಯಾಪ್ತಿ ಯಲ್ಲಿ ಪ್ರಕರಣ ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ