ಊರು ಅಂದ ಮೇಲೆ ಸಮಸ್ಯೆ ಇರುತ್ತದೆ. ಹೆಣ್ಣು ಮಕ್ಕಳು ಅದನ್ನು ನಿಭಾಯಿಸುವುದು ಕಲಿತುಕೊಳ್ಳಬೇಕು.
ಸ್ಯಾಂಡಲ್ ವುಡ್ ಸಿನಿಮಾ ರಂಗದಿಂದ ದೂರವಾಗಿರೋ ನಟಿ ಆಶಿತಾ ಏಕಾಏಕಿ ಕ್ಯಾಮೆರಾ ಮುಂದೆ ಕಾಣಿಸಿಕೊಂಡು ಮೀಟೂ ಆರೋಪ ಮಾಡಿದ್ದಾರೆ. ಸದ್ಯ ಆಶಿತಾ ಹೇಳಿಕೆ ಸಿನಿ ರಂಗದಲ್ಲಿ ದೊಡ್ಡ ಮಟ್ಟಿಗೆ ಸಂಚಲನ ಸೃಷ್ಟಿಸಿದೆ. ಈ ಬಗ್ಗೆ ಸ್ಯಾಂಡಲ್ ವುಡ್ ನಿರ್ದೇಶಕ ಶಶಾಂಕ್ ಪ್ರತಿಕ್ರಿಯೆ ನೀಡಿದ್ದಾರೆ.
'ಆಶಿತಾ ಅವರಿಗೆ ಆಗಿರುವ ಅನುಭವದಿಂದ ಅವರು ಸಿನಿಮಾ ರಂಗ ಬಿಟ್ಟು ಹೋಗಿದ್ದಾರೆ. ಯಾರೂ ಇನ್ನೊಬ್ಬರಿಗೆ ತಲೆ ಬಗ್ಗಿಸುವ ಅವಶ್ಯಕತೆ ಇಲ್ಲ. ಯಾವುದೇ ಕ್ಷೇತ್ರದಲ್ಲಿ ಆಗಲಿ ಗಂಡಸರು ಈ ರೀತಿ ಮಾಡಲು ಹೆದರುತ್ತಾರೆ. ಬಾ ಬಾರೋ ರಸಿಕ ಟೈಮ್ ನಲ್ಲಿ ನಾನು ಗೀತ ಸಾಹಿತಿಯಾಗಿ ಅವರ ಸಿನಿಮಾದಲ್ಲಿ ಕೆಲಸ ಮಾಡಿದ್ದೆ. ಮೊಗ್ಗಿನ ಮನಸ್ಸು ಸಿನಿಮಾಗೆ ಆಶಿತಾ ಅವರಿಗೆ ಪಾತ್ರದ ಆಫರ್ ಮಾಡಿದ್ದೆ. ಕೆಲವು ಕಾರಣಗಳಿಂದ ಅವರು ನಟಿಸಲು ಸಾಧ್ಯವಾಗಲಿಲ್ಲ' ಎಂದಿದ್ದಾರೆ.
ಆಶಿತಾ ಅವರು, 'ಅವರ ಅನುಭವಕ್ಕೆ ಬಂದಿರುವ ವಿಚಾರವನ್ನು ಹೇಳಿ ಕೊಂಡಿದ್ದಾರೆ. ಮೀಟು ಅನ್ನುವುದು ಅನಾದಿಕಾಲದಿಂದಲೂ ಬಂದಿರುವ ಒಂದು ಸಮಸ್ಯೆ. ಕೆಟ್ಟ ಮನಸ್ಸಿರುವ ವ್ಯಕ್ತಿಗಳು ಬದಲಾಗಬೇಕು. ಹೆಣ್ಣುಮಕ್ಕಳು ಅದನ್ನು ನಿಭಾಯಿಸುವ ರೀತಿ ಕಲಿತು ಕೊಳ್ಳಬೇಕು' ಎಂದು ನಿರ್ದೇಶಕ ಶಶಾಂಕ್ ಹೇಳಿದ್ದಾರೆ.