ಅಮ್ಮ ಫೇವರಿಟ್ ತಿಂಡಿ ಮಾಡುತ್ತಿರಲಿಲ್ಲ ಎಂದು ಯುವತಿ ಹೀಗೆ ಮಾಡೋದಾ?!
ಅಮ್ಮ ತನ್ನ ಫೇವರಿಟ್ ತಿಂಡಿ ಮಾಡಲಿಲ್ಲವೆಂದು ಬೇಸರಗೊಂಡ 16 ವರ್ಷ ಅಪ್ರಾಪ್ತ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ರಾತ್ರಿ ಊಟಕ್ಕೆ ಅಮ್ಮ ಮಾಡಿದ ಅಡುಗೆ ಇಷ್ಟವಿಲ್ಲವೆಂದು ಮಗಳು ತಗಾದೆ ತೆಗೆದಿದ್ದಳು. ಬಳಿಕ ತನ್ನ ರೂಂಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾಳೆ. ಎಷ್ಟು ಹೊತ್ತಾದರೂ ಆಕೆ ಬಾಗಿಲು ತೆಗೆಯದೇ ಇದ್ದಾಗ ಗಾಬರಿಗೊಂಡ ಮನೆಯವರು ಬಲವಂತವಾಗಿ ಬಾಗಿಲು ತೆರೆದು ನೋಡಿದಾಗ ನೇಣಿಗೆ ಶರಣಾಗಿರುವುದು ಪತ್ತೆಯಾಗಿದೆ.