ಶಕ್ತಿ ಯೋಜನೆಯನ್ನ ಕಷ್ಡದಲ್ಲೇ ಒಪ್ಪಿಕೊಂಡಿದ್ದೀವಿಡಿಸಿಎಂ ಡಿ.ಕೆ. ಶಿವಕುಮಾರ್

ಶನಿವಾರ, 7 ಅಕ್ಟೋಬರ್ 2023 (13:45 IST)
ನೂತನ ಬಸ್ ಗಳಿಗೆ ಚಾಲನೆ ನೀಡಿ ಮಾತನಾಡಿದ ಡಿಸಿಎಂ ಪ್ರತಿಕ್ರಿಯಿಸಿದ್ದು,ಇವತ್ತು ಹೊಸ ಅಧ್ಯಾಯಕ್ಕೆ ಕಾಲಿಟ್ಟಿದ್ದೇವೆ.ಪ್ರನಾಳಿಕೆ ಯೋಜನೆಗೆ ಕೆಲವರು ಟೀಕೆ ಮಾಡಿದ್ರು.ಕೆಲ ರಾಜ್ಯದ ಮುಖ್ಯಮಂತ್ರಿಗಳೂ ವಿರೋಧ ವ್ಯಕ್ತಪಡಿಸಿದ್ರು.ಆರ್ಥಿಕವಾಗಿ ಮಹಿಳೆಯರಿಗೆ ಶಕ್ತಿ  ನೀಡ್ಬೇಕು ಅಂತ ಶಕ್ತಿಯೋಜನೆ ಜಾರಿ ಮಾಡಿದ್ವಿ.ಇದೂವರೆಗೂ 72ಕೋಟಿಯಷ್ಟು ಮಹಿಳೆಯರು ಉಚಿತ ಬಸ್ ನ ಪ್ರಯೋಗ ಪಡೆದಿದ್ದಾರೆ.ಶಕ್ತಿ ಯೋಜನೆಯಿಂದ ಸರ್ಕಾರಕ್ಕೆ ಹೊರೆಯಾಗಿದೆ.ಶಕ್ತಿ ಯೋಜನೆಯನ್ನ ಕಷ್ಡದಲ್ಲೇ ಒಪ್ಪಿಕೊಂಡಿದ್ದೀವಿ.ಪ್ರನಾಳಿಕೆಯಲ್ಲಿ ಘೋಷಣೆ ಮಾಡಿದ್ದಕ್ಕೆ ನಾವು.ಮುಂದುವರೆಸೋ ಅನಿವಾರ್ಯ ಎಂದು ಪರೋಕ್ಷವಾಗಿ  ಡಿಕೆಶಿವಕುಮಾರ್ ಹೊಗಳಿದ್ದಾರೆ.
 
ಸಾರಿಗೆ ನಿಗಮದಲ್ಲಿ ಕಳೆದ 6 ವರ್ಷದಿಂದ ವೇತನ ಪರಿಷ್ಕರಣೆ ಆಗಿಲ್ಲ.ಸದ್ಯ KSRTC ಯಲ್ಲಿ ಕರ್ತವ್ಯದಲ್ಲಿ ಮೃತ ನೌಕರರಿಗೆ 1ಕೋಟಿ ವಿಮೆ ನೀಡಲಾಗ್ತಿದೆ.ಇದನ್ನ ಇತರ ನಿಗಮಗಳಿಗೂ ವಿಸ್ತರಣೆ ಮಾಡುವ ಚಿಂತನೆ ನಡೆದಿದೆ.ನಾನು ಪಲ್ಲಕ್ಕಿ ಬಸ್ ನಲ್ಲಿ ಕುಳಿತು ನೋಡಿದೆಮಹಾಗೆನೇ ಬಸ್ ನ ಸೀಟ್ ನಲ್ಲಿ ಮಲಗಿ ನೋಡಿದೆ.ಸರಿಯಾಗಿ  ಬಸ್ ನ ಸೀಟ್ 6 ಅಡಿ ಉದ್ದವಾಗಿದೆ.ನನ್ನ ಹೆಂಡತಿಗೂ ಪಲ್ಲಕ್ಕಿ ಬಸ್ ನಲ್ಲಿ ಮೈಸೂರಿಗೆ ಹೋಗುವಂತೆ ತಿಳಿಸಿದ್ದೇನೆ.ಇಡೀ ದೇಶದಲ್ಲೇ ನಮ್ಮ ರಾಜ್ಯದ ಸಾರಿಗೆ ಮಾದರಿಯಾಗಿದೆ.ಇಲ್ಲಿನ ಸೇವೆಯನ್ನ ಇತರ ರಾಜ್ಯಗಳ ಸಾರಿಗೆಗೂ ಅಳವಡಿಕೆ ಮಾಡುವ ಚಿಂತನೆ ಮಾಡ್ತಿದ್ದಾರೆ.ನೂತನ ಬಸ್ ಗೆ ಪಲ್ಲಕ್ಕಿ ಹೆಸರು ಕೊಟ್ಟ ಸಚಿವರಿಗೆ ಪ್ರಶಸ್ತಿ ಕೊಡಬೇಕು.ಪಲ್ಲಕ್ಕಿ ಬಸ್ ಪ್ರತಿ ಮನೆಯರ ಮಹಾರಾಣಿಯನ್ನ ಕರೆದುಕೊಂಡು ಹೋಗಲಿದೆ ಎಂದು ಡಿಕೆಶಿವಕುಮಾರ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ