ಅಗಲಿದ ಗದಗ ಶ್ರೀಗಳಿಗೆ ಶಾಮನೂರು ಸಂತಾಪ
ಗದಗಿನ ತೋಂಟದಾರ್ಯ ಶ್ರೀಗಳು ನಿಧನ ಹಿನ್ನಲೆ ದಾವಣಗೆರೆಯಲ್ಲಿಂದು, ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ, ಹಿರಿಯ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಸಂತಾಪ ಸೂಚಿಸಿದ್ದಾರೆ.
ತೋಂಟದಾರ್ಯ ಸ್ವಾಮಿಜಿ ತುಂಬಾ ಒಳ್ಳೆಯರು, ಅವರಿಂದು ವಿಧಿವಶರಾಗಿದ್ದಾರೆ. ಅವರಿನ್ನೂ ಬದುಕಿ ನಮಗೆ ಮಾರ್ಗದರ್ಶನ ಮಾಡಬೇಕಿತ್ತು, ಆದರೆ ಅಕಾಲಿಕ ನಿಧನರಾಗಿದ್ದಾರೆ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದಾವಣಗೆರೆಯಲ್ಲಿ ಶ್ರೀಗಳಿಗೆ ಶಾಮನೂರು ಸಂತಾಪ ಸೂಚಿಸಿದ್ದಾರೆ.