ನಮ್ಮ ಸಮುದಾಯದ ಶಾಮನೂರು ಶಿವಶಂಕರಪ್ಪರಿಗೆ ಡಿಸಿಎಂ ಸ್ಥಾನ ಕೊಟ್ಟರೂ ಬೇಜಾರಿಲ್ಲ- ಶಾಸಕ ಎಂ.ಬಿ.ಪಾಟೀಲ್
ಈ ಬಗ್ಗೆ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ. ನನಗೆ ಜಲಸಂಪನ್ಮೂಲ ಖಾತೆಯೇ ಬೇಕಿಂದಿಲ್ಲ. ಸಮ್ಮಿಶ್ರ ಸರ್ಕಾರ ಇರುವುದರಿಂದ ಅದರ ಬಗ್ಗೆ ನಾಯಕರು ತೀರ್ಮಾನ ಮಾಡಬೇಕು. ಎರಡು ಡಿಸಿಎಂ ಹುದ್ದೆ ಬೇಕಿದೆ. ದಕ್ಷಿಣದಲ್ಲಿ ಪರಮೇಶ್ವರ್, ಡಿಕೆಶಿಗೆ ಕೊಟ್ಟರೆ, ಉತ್ತರದಲ್ಲೂ ಒಬ್ಬರಿಗೆ ಅವಕಾಶ ಮಾಡಿಕೊಡಲಿ, ನಾನಾಗಬಹುದು, ಶಾಮನೂರು ಆಗಬಹುದು ಯಾರಿಗೆ ಬೇಕಾದರೂ ಕೊಡಲಿ, ಶಾಮನೂರಿಗೆ ಡಿಸಿಎಂ ಸ್ಥಾನ ಕೊಟ್ಟರೂ ಬೇಜಾರಿಲ್ಲ ಎಂದು ಹೇಳಿದ್ದಾರೆ.