ಶಿಗ್ಲಿ ಬಸ್ಯಾಗೆ 5 ವರ್ಷ ಜೈಲು ಶಿಕ್ಷೆ

ಗುರುವಾರ, 27 ಡಿಸೆಂಬರ್ 2018 (14:15 IST)
ನೂರಕ್ಕಿಂತ ಹೆಚ್ಚು ಪ್ರಕರಣಗಳನ್ನು ಸ್ವತಃ ತಾನೇ ವಾದ ಮಾಡಿದ್ದ ಶಿಗ್ಲಿ ಬಸ್ಯಾಗೆ, ನ್ಯಾಯಾಲಯ ಕಾರಾಗೃಹ ಶಿಕ್ಷೆ ಪ್ರಕಟ ಮಾಡಿದೆ.

ಶಿಗ್ಲಿ ಬಸ್ಯಾಗೆ ಹಾವೇರಿಯ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ. ಬಸವರಾಜ ಭಟ್ಕಳ ಅಲಿಯಾಸ್ ಶಿಗ್ಲಿ ಬಸ್ಯಾ ಶಿಕ್ಷೆಗೊಳಗಾದ ಆರೋಪಿಯಾಗಿದ್ದಾನೆ.

5 ವರ್ಷ ಸಾದಾ ಕಾರಾಗೃಹ ಶಿಕ್ಷೆ ಮತ್ತು ರೂ.21ಸಾವಿರ ದಂಡ ವಿಧಿಸಲಾಗಿದೆ.  

ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕೆ.ಸಿ.ಸದಾನಂದಸ್ವಾಮೀ ತೀರ್ಪು ಪ್ರಕಟ ಮಾಡಿದ್ದಾರೆ.
2011 ಆಗಸ್ಟ್ 12 ರಂದು ನ್ಯಾಯಾಲಯದ ಆವರಣದಲ್ಲಿ ಜಾಲವಾಡಗಿ ಎಂಬ ವಕೀಲರ ಹೆಬ್ಬೆರಳು ಕಚ್ಚಿ ಕೊಲೆ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಶಿಗ್ಲಿ ಬಸ್ಯಾ ಅಪರಾಧಿ ಎಂದು ಕೋರ್ಟ ತೀರ್ಪು ನೀಡಿದೆ.

ಹಲ್ಲೆಗೊಳಗಾದ ಜಾಲವಾಡಗಿ ವಕೀಲರಿಂದ ಆರೋಪಿ ವಿರುದ್ಧ ದೂರು ದಾಖಲಾಗಿತ್ತು. ಆರೋಪಿ ಈ ಮೊದಲು ತನ್ನ ಮೇಲೆ  ಇದ್ದ ಕೇಸ್ ಗಳನ್ನ ಸ್ವತಃ ತಾನೇ ನ್ಯಾಯಾಲಯದಲ್ಲಿ ವಾದ ಮಾಡಿ ಬಿಡುಗಡೆಗೊಂಡಿದ್ದನು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ