ಶೀರೂರು ಸ್ವಾಮೀಜಿಗಳ ಮರಣೋತ್ತರ ಪರೀಕ್ಷೆ ವರದಿ ಬಂತು! ಆದರೆ...!!
ಮರಣೋತ್ತರ ಪರೀಕ್ಷೆಯ 8 ಪುಟಗಳ ಪ್ರಾಥಮಿಕ ವರದಿ ಪೊಲೀಸರಿಗೆ ಲಭ್ಯವಾಗಿದೆ. ಈಗಿನ ವರದಿಯಲ್ಲಿ ಶ್ರೀಗಳಿಗೆ ಸಂಬಂಧಿಸಿದ ಮಾಹಿತಿ, ಎಲ್ಲೆಲ್ಲಿ ರಕ್ತಸ್ರಾವವಾಗಿತ್ತು, ಆರೋಗ್ಯ ಸ್ಥಿತಿ ಹೇಗಿತ್ತು ಎಂಬಿತ್ಯಾದಿ ವಿವರಗಳಿವೆ.
ಆದರೆ ಸಾವಿಗೆ ವಿಷಪ್ರಾಷನವೇ ಕಾರಣವೋ ಎಂಬುದು ಸ್ಪಷ್ಟವಾಗಿಲ್ಲ. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಕೈ ಸೇರಿದ ಬಳಿಕ ಎರಡನ್ನೂ ವಿಶ್ಲೇಷಿಸಿ ಸಾವಿಗೆ ನಿಖರ ಕಾರಣ ಪತ್ತೆ ಹಚ್ಚಬೇಕಷ್ಟೇ ಎಂದು ಪೊಲೀಸರು ತಿಳಿಸಿದ್ದಾರೆ.