ಸಿದ್ದರಾಮಯ್ಯ ಬೇಕಾದ್ರೆ ಮೊಮ್ಮಕ್ಕಳನ್ನು ಆಡಿಸಿಕೊಂಡು ಕೂರಲಿ: ಹೊರಟ್ಟಿ

ಶುಕ್ರವಾರ, 10 ಜೂನ್ 2022 (20:45 IST)
ಇತ್ತಿಚೆಗಷ್ಟೆ ಮಾಜಿ ಸಿಎಂ ಸಿದ್ದರಾಮಯ್ಯ, ಬಸವರಾಜ್ ಹೊರಟ್ಟಿ, ಮೊಮ್ಮಕ್ಕಳನ್ನು ಆಡಿಸುತ್ತಾ, ಮನೆಯಲ್ಲಿ ಇರಲಿ ಎಂದು ನೀಡಿದ ಹೇಳಿಕೆಗೆ ಹೊರಟ್ಟಿ ಅವರೇ ಎದುರೇಟು ನೀಡಿದರು.
ಧಾರವಾಡದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವನಿಗೆ ಮೂರು ಮೊಮ್ಮಕ್ಕಳು ಇದ್ದಾರೆ. ಮತ್ತು ವಯಸ್ಸಿನಲ್ಲಿ ನನಗಿಂತ ಒಂದು ವರ್ಷ ಹತ್ತು ತಿಂಗಳು ಹಿರಿಯ. ಬೇಕಾದರೆ ಅವನೇ ಮೊಮ್ಮಕ್ಕಳನ್ನು ಆಡಿಸಿಕೊಂಡು ಮನೆಯಲ್ಲಿ ಕೂರಲಿ ಎಂದು ಕಿಡಿಕಾರಿದರು. 
ರಾತ್ರಿ ಕಂಡ ಬಾವಿಗೆ ಹೊರಟ್ಟಿ ಹಗಲು ಬಿದ್ದರು ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಒಬ್ಬೊಬ್ಬರು ಒಂದೊಂದು ಕಡೆ ಬಿಳ್ತಾರೆ. ರಾಜಕಾರಣದಲ್ಲಿ ವೈರಿ ಹಾಗೂ ಬೇರೆ ಎಂದು ತಿಳಿಯಬೇಡಿ. ನಾನು 16 ಸಿಎಂಗಳನ್ನು ನೋಡಿದ್ದೆನೆ. 182 ಮಾಜಿ ಮಂತ್ರಿಗಳನ್ನು ನೋಡಿದ್ದೆನೆ 1200 ಶಾಸಕರನ್ನು ನೋಡಿದ್ದೆನೆ. ನನ್ನಷ್ಟು ಮಾಹಿತಿ ಈ ರಾಜ್ಯದಲ್ಲಿ ಯಾರಿಗೂ ಇಲ್ಲಾ ಎಂದರು.
ವಿಧಾನ ಸೌಧದಲ್ಲಿ ಎಲ್ಲಿ ಯಾವ ಕಲ್ಲಿದೆ ಎಂದು ನನಗೆ ಗೊತ್ತಿದೆ. ಎಲ್ಲವನ್ನು ಹೇಳಲು, ಸುಧಾರಣೆ ಮಾಡಲು ಆಗಲ್ಲ ಎಂದ ಅವರು, ಈ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು ಎಂದರು.
ಪಠ್ಯ ಪುಸ್ತಕದಲ್ಲಿ ಬಸವಣ್ಣನವರ ಅಪಚಾರ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಯಾವುದೇ ಒಂದು ಪುಸ್ತಕ ಮಾಡಬೇಕಾದರೆ ಡಿಎಸ್ ಆರ್ ಟಿ ಒಳಗೆ ವಿಭಾಗ ಇರುತ್ತದೆ. ಈ ಬಗ್ಗೆ ಶಿಕ್ಷಣ ಇಲಾಖೆಗೆ ಸಂಪೂರ್ಣ ಜವಾಬ್ದಾರಿ ನೀಡಬೇಕು. ಈ ಬಗ್ಗೆ ಅನಗತ್ಯ ವಿವಾದ ಬೇಡಾ. ಸುಮ್ಮ ಸುಮ್ಮನೆ ಯಾವದಕ್ಕೋ ರಾಜಕಾರಣ ಮಾಡುತ್ತಾರೆ. ಅದು ಸರಿಯಲ್ಲ ಎಂದರು.
ಸರ್ವೋದಯ ಶಿಕ್ಷಣ ಸಂಸ್ಥೆ ವಿಚಾರದ ಕುರಿತಾಗಿ ಪ್ರತಿ ವರ್ಷ ನನ್ನ ಮೇಲೆ ಈ ಬಗ್ಗೆ ಆರೋಪ ಮಾಡಲಾಗುತ್ತದೆ. ಸಂಸ್ಥೆ ಎರಡು ವರ್ಷ ಆಗಿದ್ದರೆ ಮುಚ್ಚಿ ಹೋಗತ್ತಿತ್ತು. ನಾನು ಸಾಕಷ್ಟು ಕೆಲಸ ಮಾಡಿದ್ದೇನೆ. ನಮ್ಮ ವಿರುದ್ಧ ಇದ್ದವರು ಕೋರ್ಟ್ ನಲ್ಲಿ ನಾಲ್ಕು ಬಾರಿ ಸೋತಿದ್ದಾರೆ. ಆದಾಗ್ಯೂ ಕೋರ್ಟ್ ಆದೇಶ ಮಾಡಿದರೆ ನಾನು ಪಾಲಿಸುತ್ತೇನೆ. ಇದು ಕೇವಲ ರಾಜಕೀಯ ಗಿಮಿಕ್ ಎಂದರು.
ಹಿಂದುಳಿದ ಮತಗಳ ವಿಚಾರಕ್ಕೆ ಸಂಬಂಧಿಸಿದಂತೆ ಹಿಂದೂಳಿದ ಮತಗಳಿಗೆ ಕತ್ತರಿ ಬಿದ್ದರೆ ಬಿಳಲಿ ಬಿಡಿ, ನೋಡೊಣ ಎಂದ ಬಸವರಾಜ ಹೊರಟ್ಟಿ ಬಿಜೆಪಿಗೆ ಹೊಗುವ ಸಂದರ್ಭದಲ್ಲಿ ನಾನು ಹುಬ್ಬಳ್ಳಿ ಅಂಜುಮನ್ ಜೊತೆ ಮಾತನಾಡಿದ್ದೇನೆ.
ಅವರನ್ನು ನಾನು ಈ ಹಿಂದಿನಿಂದಲೂ ಸಂರಕ್ಷಣೆ ಮಾಡುತ್ತ ಬಂದಿದ್ದು ಅನುದಾನ ಕೊಟ್ಟಿದ್ದೇನೆ. ಅವರು ಯಾವ ಪಕ್ಷಕ್ಕೆ ಮತ ಕೊಡದೇ ಇದ್ದರೂ ನಿಮಗೆ ಮತ ಕೊಡುತ್ತೇವೆ ಎಂದಿದ್ದಾರೆ. ಅಲ್ಪಸಂಖ್ಯಾತರು ನನ್ನ ವಿರುದ್ಧ ಮತ ಹಾಕಲ್ಲ ಎಂದರು.
ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಗೆ ಶಿಕ್ಷಕರ ಮತಗಳೇ ಇಲ್ಲಾ. ಮೈಸೂರು, ಬೆಂಗಳೂರು ಕಡೆ ಮಾತ್ರ ಇದ್ದಾರೆ. ನಾನು ಎಲ್ಲಿರುತ್ತೆನೆ ಅಲ್ಲಿ ಮತ ಇವೆ. ಮಾಜಿ ಸಿಎಂ ಕುಮಾರಸ್ವಾಮಿ ಒಬ್ಬರಿಗೆ ಕರೆ ಮಾಡಿ ಮತ ಕೇಳಿದ್ದಾರೆ. ಅವರು ಹೊರಟ್ಟಿ ಎಲ್ಲಿರುತ್ತಾರೆ, ಅಲ್ಲಿ ಮತ ಹಾಕುತ್ತೇನೆ ಎಂದು ಹೇಳಿದ್ದಾರೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ