ರಾಜಕಾರಣಿಗಳ ಬಂಧನಕ್ಕೆ ಒತ್ತಾಯಿಸಿದ ಸಿದ್ದರಾಮಯ್ಯ

ಬುಧವಾರ, 21 ಸೆಪ್ಟಂಬರ್ 2022 (06:11 IST)
ಬೆಂಗಳೂರು : ನಿರೀಕ್ಷೆಯಂತೆ ಸದನದಲ್ಲಿ ಪಿಎಸ್ಐ ನೇಮಕಾತಿ ಹಗರಣ ಪ್ರತಿಧ್ವನಿಸಿದೆ.

ವಿಷಯ ಪ್ರಸ್ತಾಪಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರದ ಮೇಲೆ ಮುಗಿಬಿದ್ರು. ಪ್ರಕರಣದಲ್ಲಿ ಪಾಲ್ಗೊಂಡಿರೋ ರಾಜಕಾರಣಿಗಳ ಬಂಧನಕ್ಕೆ ಒತ್ತಾಯಿಸಿದ್ರು.

ಹಾಲಿ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆಗೆ ಒತ್ತಾಯಿಸಿದರು. ಆಡಳಿತ ಮತ್ತು ವಿಪಕ್ಷಗಳ ಮಧ್ಯೆ ಜೋರು ವಾಗ್ಯುದ್ಧ ನಡೆಯಿತು. ಸದನದ ಬಾವಿಗಿಳಿದು ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದ್ರು.

ಉದ್ಯೋಗಾಂಕ್ಷಿಗಳು ನೀಡಿದ್ದ ಅಕ್ಕಿ, ಬೇಳೆಯ ಗಂಟನ್ನು ಸಿದ್ದರಾಮಯ್ಯ ತೋರಿಸಿದ್ದಕ್ಕೆ ಇದೆಲ್ಲಾ ಇವೆಂಟ್ ಮ್ಯಾನೇಜ್ಮೆಂಟ್ ಎಂದು ಸಿಎಂ ತಿರುಗೇಟು ನೀಡಿದರು. ಆಗ ನೀವೆಷ್ಟೇ ಹೆದರಿಸಲು ನೋಡಿದ್ರೂ ನಾನು ಹೆದರಲ್ಲ. 2006ರಿಂದಲೂ ತನಿಖೆ ಮಾಡಿಸಿ, ಐ ಡೋಂಟ್ ಕೇರ್ ಎಂದು ಸಿದ್ದರಾಮಯ್ಯ ಸವಾಲು ಹಾಕಿದ್ರು. 

ಕೊನೆಗೆ ತನಿಖೆ ಮಾಡಿಸೋ ಭರವಸೆಯನ್ನು ಸಿಎಂ ನೀಡಿದ್ರು. ಆದರೆ ಆರೋಪಿ ರಾಜಕಾರಣಿಗಳ ಬಂಧನ ಆಗ್ಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ರು. ಮಾಜಿ ಸಿಎಂ ಪುತ್ರನ ಪಾತ್ರ ಬಗ್ಗೆ ಯತ್ನಾಳ್ ಆರೋಪಗಳನ್ನು ಸಿದ್ದರಾಮಯ್ಯ ಪ್ರಸ್ತಾಪಿಸಿದ್ರು. ಯಾರು ಆ ಮಾಜಿ ಸಿಎಂ ಮಗ ಎಂದು ಪ್ರಶ್ನಿಸಿದರು.

ಈ ಮಧ್ಯೆ ತನಿಖೆ ಬಿಗಿಯಾಗಿ ನಡೀತಿದೆ ಅಂತಾ ಸರ್ಕಾರಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಶಹಬ್ಬಾಶ್ಗಿರಿ ಕೊಟ್ರು. ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ಸದ್ಯರು ಭಿತ್ತಿಪತ್ರ ಪ್ರದರ್ಶನ ಮಾಡಿದ್ರು. ಇದಕ್ಕೆ ಪ್ರಿಯಾಂಕ್, ಸಿದ್ದರಾಮಯ್ಯ ಸಿಟ್ಟಾದ್ರು. ಕಾಂಗ್ರೆಸ್ ವಿರುದ್ಧ ಸಚಿವ ಸುಧಾಕರ್, ಅಶೋಕ್ ವಾಗ್ದಾಳಿ ನಡೆಸಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ