ತನಗೆ ಒಲಿಂಪಿಕ್ಸ್ ಪದಕ ತಪ್ಪಿದ್ದಕ್ಕೆ ನೀತಾ ಅಂಬಾನಿ ಮೇಲೆ ಗೂಬೆ ಕೂರಿಸಿದ ವಿನೇಶ್ ಫೋಗಟ್

Sampriya

ಶುಕ್ರವಾರ, 4 ಅಕ್ಟೋಬರ್ 2024 (17:04 IST)
Photo Courtesy X
ಹರಿಯಾಣ: 100 ಗ್ರಾಂ ತೂಕ ಹೆಚ್ಚಳದಿಂದ ಫೈನಾಲ್ ಸ್ಪರ್ಧೆಯಿಂದ ಅನರ್ಹಗೊಂಡ ವಿನೇಶ್ ಫೋಗಟ್ ಅವರು ಇದೀಗ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಭಾರತದ ಪ್ರತಿನಿಧಿಯಾಗಿರುವ ನೀತಾ ಅಂಬಾನಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಜುಲಾನಾದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಹರಿಯಾಣ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಕುಸ್ತಿಪಟು ವಿನೇಶ್ ಫೋಗಟ್ ಅವರು ಈಚೆಗೆ ಭಾರತೀಯ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷೆ ಪಿಟಿ ಉಷಾ ಅವರು ಯಾವುದೇ ಬೆಂಬಲವನ್ನು ನೀಡಿಲ್ಲ ಎಂದು ಗಂಭೀರ ಆರೋಪ ಮಾಡಿದ್ದರು. ಇದೀಗ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿರುವ ವಿನೇಶ್ ಅವರು ನೀತಾ ಅಂಬಾನಿ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

ಈಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ವಿನೇಶ್ ಫೋಗಟ್, ನೀತಾ ಅಂಬಾನಿ ಅವರು ಮನಸ್ಸು ಮಾಡಿದ್ದರೆ ಅನರ್ಹತೆಯ ಬಗ್ಗೆ ಏನಾದರೂ ಮಾಡಬಹುದಿತ್ತು. ಇಲ್ಲದಿದ್ದರೆ, ಅವಳು IOC ಯಲ್ಲಿರುವುದಕ್ಕೆ ಅರ್ಥವೇನು ಎಂದು ಪ್ರಶ್ನೆ ಮಾಡಿದ್ದಾರೆ.

ಪ್ಯಾರೀಸ್​ ಒಲಿಂಪಿಕ್ಸ್‌ನಲ್ಲಿ ಅನರ್ಹಗೊಂಡ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಕುಸ್ತಿಪಟು ವಿನೇಶ್​ ಫೋಗಟ್​ ಅವರನ್ನು ಭೇಟಿಯಾಗಿದ್ದ  ಪಿ.ಟಿ.ಉಷಾ ಫೋಟೋ ಕ್ಲಿಕ್ಕಿಸಿದ್ದಕ್ಕೆ ವಿನೇಶ್ ಅವರು ಆಕ್ರೋಶ ಹೊರಹಾಕಿದ್ದರು. ನಾನು ಆಸ್ಪತ್ರೆಯಲ್ಲಿದ್ದಾಗ ಪಿ.ಟಿ ಉಷಾ ಮೇಡಂ  ಭೇಟಿ ಮಾಡಿದರು.ನನ್ನ ಅನುಮತಿಯಿಲ್ಲದೆ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು ಎಂದು ಅಸಮಾಧಾನ ಹೊರಹಾಕಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ