ರಾಜಧಾನಿಯಲ್ಲಿ ಟ್ರಾಫಿಕ್ ಜಾಮ್ ಸಂಜೆ ಹೆಚ್ಚು
ರಾಜ್ಯ ರಾಜಧಾನಿಯಲ್ಲಿ ಟ್ರಾಫಿಕ್ ದಟ್ಟಣೆ ಕುರಿತು ಹೆಚ್ಚೇನೂ ಹೇಳುವ ಅಗತ್ಯವೇ ಇಲ್ಲ. ನಗರದಲ್ಲಿ ಸಂಜೆಯ ವೇಳೆ ಹೆಚ್ಚಿನ ರಸ್ತೆ ಅಪಘಾತಗಳು ಸಂಭವಿಸುತ್ತಿರುವುದು ಗಮನಕ್ಕೆ ಬಂದಿದೆ.ಅಪಘಾತಕ್ಕೆ ತುತ್ತಾಗುತ್ತಿರುವವರಲ್ಲಿ 40- 59ರ ವಯೋಮಾನದ ಮಹಿಳೆಯರು ಹೆಚ್ಚಿದ್ದಾರೆ.ಕಳೆದ 7 ವರ್ಷಗಳಲ್ಲಿ ಬೆಂಗಳೂರು ನಗರದಲ್ಲಿ ರಸ್ತೆ ಅಪಘಾತ ಸಂಬಂಧ ದಾಖಲಾದ ಎಫ್ ಐ ಆರ್ ಗಳನ್ನು ಅಧ್ಯಯನಕೊಳಪಡಿಸಿದಾಗ ಈ ಮಾಹಿತಿ ಲಭ್ಯವಾಗಿದೆ.