ಕ್ರಿಸ್ ಮಸ್ ಹಬ್ಬವನ್ನು ವೆಲ್ ಕಮ್ ಮಾಡಲು ಸಿಲಿಕಾನ್ ಸಿಟಿಯ ಭರ್ಜರಿ ತಯಾರಿಗಳನ್ನು ಮಾಡ್ತೊಂಡಿದೆ ... ಸತತ ಎರಡು ವರ್ಷದ ನಂತರ ರಂಗಿನ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಜನರು ಮುಂದಾಗಿದ್ದಾರೆ .. ಚರ್ಚ್ ಗಳಂತು ಬಣ್ಣ ಬಣ್ಣದ ದೀಪಗಳಿಂದ ಸಿಂಗರಿಸಿಕೊಂಡು ಜಗಮಗಿಸುತ್ತಿವೆ .. ಇನ್ನು ನಾಳೆ ಕ್ರಿಸ್ಮಸ್ ಹಬ್ಬಕ್ಕೆ ಚರ್ಚ್ ಗಳಲ್ಲಿ ಏನೆಲ್ಲಾ ತಯಾರಿ ಮಾಡ್ಕೊಂಡಿದ್ದಾರೆ ? ಯಾವ ರೀತಿಯಲ್ಲಿ ಹಬ್ಬನ ಆಚರಿಸುತ್ತಾರೆ ಅಂತ ಇಲ್ಲಿದೆ ನೊಡಿ ...
ನಾಳೆ ಯೇಸುಕ್ರಿಸ್ತ್ ಜನ್ಮಿಸಿದ ಪವಿತ್ರ ದಿನ. ಸ್ವರ್ಗದಿಂದ ಯೇಸು ಧರೆಗಳಿದ ಕ್ರಿಸ್ ಮಸ್ ಹಬ್ಬದ ಆಚರಣೆಗಾಗಿ ಉದ್ಯಾನ ನಗರಿಯ ಚರ್ಚ್ ಗಳಲ್ಲಿ ಸಕಲ ಸಿದ್ದತೆ ನಡೆಸಲಾಗುತ್ತಿದೆ. ನಗರದ ಪ್ರಮುಖ ಚರ್ಚ್ ಗಳಾದ ಶಿವಾಜಿನಗರದ ಸಂತ ಮೇರಿ ಬಸಾಲಿಕಾ ಚರ್ಚ್, ವಿಲ್ಸನ್ ಗಾರ್ಡನ್ ನಲ್ಲಿರುವ ಸಿಎಸ್ ಐ ಚರ್ಚ್, ಕೋರಮಂಗಲದ ಸೆಂಟ್ ಆಂಟನಿ ಚರ್ಚ್,ಬ್ರಿಗೇಡ್ ರಸ್ತೆಯಲ್ಲಿರುವ ಸೆಂಟ್ ಪ್ಯಾಟ್ರಿಕ್ ಚರ್ಚ್ ಗಳು ದೀಪಾಲಂಕಾರಗೊಂಡು ಭಕ್ತರನ್ನು ತಮ್ಮತ್ತ ಸೆಳೆಯುತ್ತಿದೆ,ಅದರಲ್ಲೂ ಶಿವಾಜಿನಗರದ ಸಂತ ಮೇರಿ ಚರ್ಚ್ ಗೆ ಇಂದೇ ಭೇಟಿ ನೀಡುತ್ತಿರುವ ಭಕ್ತರು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ