ಗೌರಿ ಲಂಕೇಶ್ ಹತ್ಯೆ: ರಾಜರಾಜೇಶ್ವರಿನಗರದಲ್ಲಿ ತೀವ್ರ ಶೋಧ

ಬುಧವಾರ, 20 ಸೆಪ್ಟಂಬರ್ 2017 (11:38 IST)
ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆಯನ್ನ ಎಸ್ಐಟಿ ಮತ್ತಷ್ಟು ತೀವ್ರಗೊಳಿಸಿದೆ. ಗೌರಿ ಹತ್ಯೆಯ ಆಸುಪಾಸಿನಲ್ಲಿ ರಾಜರಾಜೇಶ್ವರಿ ನಗರದಲ್ಲಿ ಬಾಡಿಗೆ ಪಡೆದವರು ಮತ್ತು ಲಾಡ್ಜ್`ಗಳಲ್ಲಿ ತಂಗಿದವರ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ.

ದಿನಪತ್ರಿಕೆಗಳ ಮೂಲಕ ಕರ ಪತ್ರಗಳನ್ನ ರಾಜರಾಜೇಶ್ವರಿ ನಗರದ ನಿವಾಸಿಗಳಿಗೆ ಹಂಚಿರುವ ಎಸ್`ಐಟಿ ತಂಡ, ಬಾಡಿಗೆ ಪಡೆದವರು, ಲಾಡ್ಜ್`ಗಳಲ್ಲಿ ತಂಗಿದವರ ಬಗ್ಗೆ ವಿವರ ಕೇಳಿದ್ದಾರೆ. 20 ಸಾವಿರಕ್ಕೂ ಅಧಿಕ ಕರ ಪತ್ರಗಳನ್ನ ಹಂಚಿಕೆ ಮಾಡಲಾಗಿದ್ದು, ಕರ ಪತ್ರಗಳಲ್ಲೇ ಇಮೇಲ್, ದೂರಾವಾಣಿ ಸಂಖ್ಯೆ ಮುದ್ರಿಸಲಾಗಿದೆ. ಗೌರಿ ಹತ್ಯೆ ಬಳಿಕ ಯಾರಾದರೂ ಮನೆಗಳನ್ನ ಖಾಲಿ ಮಾಡಿದ್ದಾರಾ..? ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ವ್ಯಕ್ತಿಗಳ ಬಗ್ಗೆ ಮಾಹಿತಿ ಕೇಳಲಾಗಿದೆ.  

ಶತಾಯಗತಾಯ ಹಂತಕರ ಬೇಟೆಗೆ ಮುಂದಾಗಿರುವ ಎಸ್ಐಟಿ ತಂಡ ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸುತ್ತಿದೆ. ಗೌರಿಗೂ ಹತ್ಯೆಗೂ ಮುನ್ನ ಕೆಲ ದಿನಗಳ ಹಿಂದೆಯೇ ಬಂದಿರುವ ಹಂತಕರು ಯಾವುದಾದರೂ ಮನೆ, ಲಾಡ್ಜ್, ದೇವಸ್ಥಾನದ ವಸತಿಗೃಹಗಳು ಮತ್ತೆಲ್ಲಾದರೂ ವಾಸ್ತವ್ಯ ಹೂಡಿದ್ದರಾ ಎಂಬುದು ಪೊಲೀಸರ ಶಂಕೆಯಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ