ರೇವಣ್ಣ ಮನೆಗೆ ಸಂತ್ರಸ್ತೆಯ ಕರೆತಂದ ಎಸ್ ಐಟಿ: ಇಂದೇ ಎಚ್ ಡಿ ರೇವಣ್ಣ ಬಂಧನ ಸಾಧ್ಯತೆ

Krishnaveni K

ಶನಿವಾರ, 4 ಮೇ 2024 (13:50 IST)
Photo Courtesy: facebook
ಹಾಸನ: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಎಂಪಿ ಪ್ರಜ್ವಲ್ ರೇವಣ್ಣ ಮತ್ತು ಶಾಸಕ ಎಚ್ ಡಿ ರೇವಣ್ಣ ವಿರುದ್ಧ ಎಸ್ಐಟಿ ತನಿಖೆ ಚುರುಕುಗೊಳಿಸಿದೆ.

ಇಂದು ರೇವಣ್ಣ ಮನೆಗೆ ಎಸ್ಐಟಿ ತಂಡ ಸಂತ್ರಸ್ತ ಮಹಿಳೆಯನ್ನು ಕರೆತಂದಿದ್ದಾರೆ. ಮಹಿಳೆಯನ್ನು ರೇವಣ್ಣ ಅವರ ಹೊಳೆನರಸೀಪುರ ದಮನೆಗೆ ಕರೆತಂದು ಸ್ಥಳ ಮಹಜರು ಮಾಡಿದ್ದಾರೆ. ಈ ವೇಳೆ ಮಾಧ‍್ಯಮಗಳು, ಸಾರ್ವಜನಿಕರು ಮನೆಯ ಒಳಗೆ ಪ್ರವೇಶಿಸಿದಂತೆ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದರು.

ಲ್ಯಾಪ್ ಟಾಪ್, ಸ್ಕ್ಯಾನರ್, ಪ್ರಿಂಟರ್ ಗಳನ್ನೂ ಎಸ್ಐಟಿ ತಂಡ ತೆಗೆದುಕೊಂಡುಬಂದಿದೆ. ಪೊಲೀಸರ ತಂಡ ರೇವಣ್ಣ ಮನೆಯಲ್ಲಿ ತೀವ್ರ ಶೋಧ ನಡೆಸಿದೆ. ಈ ಪ್ರಿಂಟರ್ ಗಳನ್ನು ತೆಗೆದುಕೊಂಡು ಬಂದಿದ್ದರ ಹಿಂದಿನ ಕಾರಣವೇನೆಂದು ತಿಳಿದುಬಂದಿಲ್ಲ.

ಇನ್ನೊಂದೆಡೆ ಎಚ್ ಡಿ ರೇವಣ್ಣ ವಿರುದ್ಧ ಮನೆಕೆಲಸದಾಕೆಗೆ ಲೈಂಗಿಕ ದೌರ್ಜನ್ಯ, ಓರ್ವ ಮಹಿಳೆಯ ಅಪಹರಣ ಪ್ರಕರಣ ದಾಖಲಾಗಿದೆ. ಹೀಗಾಗಿ ಎಚ್ ಡಿ ರೇವಣ್ಣ ಬಂಧನಕ್ಕೆ ಕ್ಷಣಗಣನೆ ಶುರುವಾಗಿದೆ. ಇಂದು ಸೂಕ್ತ ದಾಖಲೆಗಳನ್ನು ಪಡೆದು ರೇವಣ್ಣನನ್ನು ಬಂಧಿಸಲು ಎಸ್ಐಟಿ ಪೊಲೀಸರು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಈ ನಡುವೆ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದು ಇಂದು ಅದರ ನಿರ್ಣಯ ತಿಳಿದುಬರಲಿದೆ. ಸದ್ಯಕ್ಕೆ ಅವರು ಮಾಧ‍್ಯಮಗಳು, ಸಾರ್ವಜನಿಕರ ಕಣ್ಣಿಗೆ ಕಾಣಿಸಿಕೊಳ್ಳುತ್ತಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ