ದೀಪಾವಳಿ ಹಬ್ಬದ ಪ್ರಯುಕ್ತ ದೇವಾಲಯಗಳಲ್ಲಿ ಗೋ ಪೂಜೆ

ಗುರುವಾರ, 4 ನವೆಂಬರ್ 2021 (17:43 IST)
ನಾಡಿನೆಲ್ಲೆಡೆ ದೀಪಾವಳಿ ಸಡಗರ ಮನೆ ಮಾಡಿದೆ. ಲಕ್ಷ್ಮಿ ಪೂಜೆಯನ್ನು ಜನರು ಭಕ್ತಿಯಿಂದ ಮಾಡ್ತಿದ್ದಾರೆ. ದೀಪಾವಳಿ ಹಬ್ಬದ ಅಂಗವಾಗಿ ರಾಜ್ಯದ ಎಲ್ಲ ದೇವಸ್ಥಾನಗಳಲ್ಲಿ ಗೋಪೂಜೆ ನಡೆಸಲು ರಾಜ್ಯ ಸರ್ಕಾರ ಆದೇಶಿಸಿದೆ. ಈ ಹಿನ್ನೆಲೆ ಸುಸೂತ್ರವಾಗಿ ಗೋಪೂಜೆ ನಡೆಸಲು ಅಧಿಕಾರಿಗಳನ್ನು ಕೂಡ ನಿಯೋಜನೆ ಮಾಡಲಾಗಿದೆ.ಜಿಲ್ಲೆಗಳ ದೇವಸ್ಥಾನಗಳಲ್ಲಿ ಗೋಪೂಜೆ ನೆರವೇರುವಂತೆ ನೋಡಿಕೊಳ್ಳುವುದು ಆಯಾ ಜಿಲ್ಲೆಯ ಅಧಿಕಾರಿಗಳ ಜವಾಬ್ದಾರಿಯಾಗಿರುತ್ತದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ. ಪೂಜೆಯ ದಿನ ಹಸುಗಳನ್ನು ದೇಗುಲಗಳಿಗೆ ಕರೆತರುವ ಹಾಗೂ ಗೋಪೂಜೆ ನೆರವೇರಿಸುವ ಜವಾಬ್ದಾರಿಯನ್ನು ನಿರ್ವಹಿಸುವಂತೆ ಪಶುಸಂಗೋಪನಾ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.ಇನ್ನು ನವೆಂಬರ್ 5ರ ಬಲಿಪಾಡ್ಯಮಿಯಂದು ಪೂಜೆ ಸಲ್ಲಿಸಲು ಆದೇಶ ನೀಡಲಾಗಿದೆ. ಸಂಜೆ 5.30 ರಿಂದ 6.30ರ ವೇಳೆಗೆ ದೇವಸ್ಥಾನಗಳಲ್ಲಿ ಗೋಪೂಜೆ ನಡೆಯಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ