ಕೋರ್ಟ್ ನಲ್ಲಿ ಪವಿತ್ರಾಗೌಡಗೆ ಬಿಸಿ ಮುಟ್ಟಿಸಿದ ಎಸ್ ಪಿಪಿ ಪ್ರಸನ್ನಕುಮಾರ್

Krishnaveni K

ಬುಧವಾರ, 28 ಆಗಸ್ಟ್ 2024 (16:41 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಸಂಚಿನಲ್ಲಿ ನಾನು ಭಾಗಿಯಾಗಿಲ್ಲ, ತಾನು ಮಹಿಳೆ ಎಂಬ ಕಾರಣಕ್ಕೆ ಜಾಮೀನು ನೀಡಬೇಕು ಎಂದು ಕೋರ್ಟ್ ಮೆಟ್ಟಿಲೇರಿದ್ದ ಪವಿತ್ರಾ ಗೌಡಗೆ ಎಸ್ ಪಿಪಿ ಪ್ರಸನ್ನಕುಮಾರ್ ಇಂದು ಕೋರ್ಟ್ ನಲ್ಲಿ ಚೆನ್ನಾಗಿಯೇ ಬಿಸಿ ಮುಟ್ಟಿಸಿದ್ದಾರೆ.

ತಾನು ಹತ್ಯೆ ಸಂಚಿನಲ್ಲಿ ಭಾಗಿಯಾಗಿಲ್ಲ ಎನ್ನುತ್ತಿದ್ದ ಪವಿತ್ರಾ ಗೌಡಗೆ ಲಾಯರ್ ಪ್ರಸನ್ನಕುಮಾರ್ ಸಾಕ್ಷಿಗಳ ಸಮೇತ ಹತ್ಯೆಯ ಪ್ರಕರಣದಲ್ಲಿ ಆಕೆಯ ಪಾತ್ರವೇನು ಎಂದು ಕೋರ್ಟ್ ಗೆ ಮನವರಿಕೆ ಮಾಡಿದ್ದಾರೆ. ಈ ಪ್ರಕರಣದಲ್ಲಿ ಪವಿತ್ರಾ ಕೂಡಾ ಸಂಚು ರೂಪಿಸಲು ಕೈ ಜೋಡಿಸಿದ್ದಾರೆ ಎಂದಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಗ್ಗೆ ಕೆಲವು ಘಟನೆಗಳನ್ನು ಪ್ರಸನ್ನಕುಮಾರ್ ವಿವರಿಸಿದ್ದಾರೆ. ಹತ್ಯೆಗೆ ಮನ್ನ ಪವಿತ್ರಾ ಕೂಡಾ ಪವನ್ ಮೊಬೈಲ್ ಮೂಲಕ ರೇಣುಕಾಸ್ವಾಮಿ ಜೊತೆ ಚ್ಯಾಟ್ ಮಾಢಿದ್ದಾಳೆ. ಬಳಿಕ ರೇಣುಕಾಸ್ವಾಮಿಯನ್ನು ಕರೆ ತಂದ ಮೇಲೆ ಸ್ವತಃ ದರ್ಶನ್ ಆಕೆಯ ಮನೆಗೆ ಹೋಗಿ ಕಪ್ಪು ಬಣ್ಣದ ಸ್ಕಾರ್ಪಿಯೋ ಕಾರ್ ನಲ್ಲಿ ಆಕೆಯನ್ನೂ ಕರೆದುಕೊಂಡು ಶೆಡ್ ಗೆ ಹೋಗಿದ್ದಾರೆ.

ಶೆಡ್ ನಲ್ಲಿ ರೇಣುಕಾಸ್ವಾಮಿಯ ಬಟ್ಟೆ ಬಿಚ್ಚಿಸಿ ಬಿದಿರಿನ ಬೆತ್ತದಲ್ಲಿ ಹೊಡೆಯಲಾಗಿದೆ. ಆತನ ಮರ್ಮಾಂಗಕ್ಕೆ ಒದ್ದಿದ್ದಾರೆ. ಈ ಹಲ್ಲೆ ಮತ್ತು ಒಳಸಂಚಿನಲ್ಲಿ ಪವಿತ್ರಾ ಕೂಡಾ ಭಾಗಿಯಾಗಿದ್ದಾರೆ. ಆಕೆ ಮಾಡಿದ ಅಪರಾಧಗಳಿಗೆ ಜೀವಾವಧಿ ಶಿಕ್ಷೆ ನೀಡುವ ಅವಕಾಶ ಕಾನೂನಿಲ್ಲಿದೆ. ಕೇವಲ ಒಬ್ಬ ಹೆಣ್ಣು ಎಂಬ ಮಾತ್ರಕ್ಕೆ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಪ್ರಸನ್ನಕುಮಾರ್ ಸಮರ್ಥವಾಗಿ ವಾದ ಮಂಡಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ